ADVERTISEMENT

Kantara: ಕೇರಳದಲ್ಲಿ ಕಾಂತಾರ ಪ್ರೀಕ್ವೆಲ್‌ ಬಿಡುಗಡೆ ಮಾಡಲಿರುವ ನಟ ಪೃಥ್ವಿರಾಜ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:58 IST
Last Updated 10 ಸೆಪ್ಟೆಂಬರ್ 2025, 2:58 IST
<div class="paragraphs"><p>ರಿಷಬ್‌ ಶೆಟ್ಟಿ</p></div>

ರಿಷಬ್‌ ಶೆಟ್ಟಿ

   

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಪ್ರೀಕ್ವೆಲ್‌ ಅ.2ರಂದು ತೆರೆಕಾಣುತ್ತಿದೆ. ಸಿನಿಮಾವನ್ನು ಕೇರಳದಲ್ಲಿ ನಟ ಪೃಥ್ವಿರಾಜ್‌ ಬಿಡುಗಡೆ ಮಾಡಲಿದ್ದಾರೆ.

ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದ್ದು, ಕೇರಳದಲ್ಲಿ ಪೃಥ್ವಿರಾಜ್‌ ಪ್ರೊಡಕ್ಷನ್ಸ್‌ ಈ ಸಿನಿಮಾವನ್ನು ಬಿಡುಗಡೆ ಮಾಡಲಿದೆ. ನೇಪಾಳ ಸೇರಿದಂತೆ ಉತ್ತರ ಭಾರತದಲ್ಲಿ ಈ ಸಿನಿಮಾವನ್ನು ಎಎ ಫಿಲ್ಮ್ಸ್‌ ಬಿಡುಗಡೆ ಮಾಡಲಿದ್ದು, ವಿದೇಶಗಳಲ್ಲಿ ಪಿಎಚ್‌ಎಫ್‌ ಸಂಸ್ಥೆಯು ರಿಲೀಸ್‌ ಮಾಡಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಸಿನಿಮಾವನ್ನು ಡ್ರೀಮ್‌ ಸ್ಕ್ರೀನ್ಸ್‌ ಇಂಟರ್‌ನ್ಯಾಷನಲ್‌ ಬಿಡುಗಡೆ ಮಾಡಲಿದೆ. 

ADVERTISEMENT

ಪ್ರೀಕ್ವೆಲ್‌ ಅನ್ನು ಈಗಾಗಲೇ ಪ್ರೈಂ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಇದಾಗಿದ್ದು, ಕನ್ನಡ, ಇಂಗ್ಲಿಷ್‌ ಸೇರಿದಂತೆ ಏಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅಜನೀಶ್‌ ಲೋಕನಾಥ್‌ ಸಂಗೀತ ನಿರ್ದೇಶನ, ಅರವಿಂದ್‌ ಎಸ್‌.ಕಶ್ಯಪ್‌ ಅವರ ಛಾಯಾಚಿತ್ರಗ್ರಹಣ ವಿದೆ. ಸಿನಿಮಾದಲ್ಲಿ ‘ಕುಲಶೇಖರ’ ಎಂಬ ಪಾತ್ರದಲ್ಲಿ ಬಾಲಿವುಡ್‌ ನಟ ಗುಲ್ಶನ್‌ ದೇವಯ್ಯ ನಟಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.