ಕರೀನಾ ಕಪೂರ್
ಚಿತ್ರ ಕೃಪೆ: ಎಕ್ಸ್
ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಇತ್ತೀಚೆಗೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸುಂದರವಾದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಕೈಗೆ ವಿಭಿನ್ನವಾದ ವಾಚ್ ಧರಿಸಿದ್ದರು. ಈಗ ಅವರ ಕೈ ಗಡಿಯಾರ ಎಲ್ಲರ ಗಮನ ಸೆಳೆದಿದೆ.
ಹೇಗಿದೆ ವಾಚ್?
ವರದಿಗಳ ಪ್ರಕಾರ, ನಟಿ ಕರೀನಾ ಕಪೂರ್ ಅವರ ಕೈಯಲ್ಲಿದ್ದ ವಾಚ್ ಐಷಾರಾಮಿಯದ್ದಾಗಿದೆ. ‘ಜೇಗರ್-ಲೆಕೌಲ್ಟ್ರೆ’ ಕಂಪನಿಗೆ ಸೇರಿದ್ದು, ಮಹಿಳೆಯರಿಗಾಗಿಯೇ ವಿಶೇಷವಾಗಿ ತಯಾರಿಸಲಾದ ವಾಚ್ ಆಗಿದೆ. ಇದು ₹12.40 ಲಕ್ಷ ಬೆಲೆ ಬಾಳುತ್ತದೆ. ವಾಚ್ ಅನ್ನು ಮೃದ್ವಂಗಿಗಳ ಚಿಪ್ಪು, ಬೆಲೆ ಬಾಳುವ ಹರಳುಗಳು ಹಾಗೂ ಸ್ಟೇನ್‌ಲೆಸ್-ಸ್ಟೀಲ್‌ನಿಂದ ತಯಾರಿಸಲಾಗಿದೆ.
ವಾಚ್ ನೋಡಲು ಆಕರ್ಷಕವಾಗಿದ್ದು, ಕಪ್ಪು ಬಣ್ಣದ ಪಟ್ಟಿ ಹಾಗೂ ಬಿಳಿ ಬಣ್ಣದ ಅರೇಬಿಕ್ ಅಂಕಿ ಸಂಖ್ಯೆಗಳಿಂದ ಕೂಡಿದೆ. ಗಂಟೆ, ನಿಮಿಷ, ಸೆಕೆಂಡುಗಳ ಜೊತೆಗೆ ರಾತ್ರಿ ಮತ್ತು ಹಗಲುಗಳನ್ನು ಈ ವಾಚ್ ತೋರಿಸುತ್ತದೆ.
ಬ್ಯಾಟರಿ ಚಾಲಿತ ವಾಚ್ ಆಗಿದ್ದು, ಸತತ 38 ಗಂಟೆಗಳ ಕಾಲ ಕೆಲಸ ಮಾಡುತ್ತದೆ. 11 ಸಣ್ಣ ವಜ್ರದ ಹರಳುಗಳಿಂದಲೂ ಇದನ್ನು ಅಲಂಕರಿಸಲಾಗಿದೆ. ಈ ವಾಚ್ ವಾಟರ್‌ಫ್ರೂಫ್ ಆಗಿದ್ದು, 3 ಸ್ಟಾರ್ ರೇಟಿಂಗ್ ಹೊಂದಿದೆ. ಭಾರತದಲ್ಲಿ ಈ ವಾಚ್‌ನ ಬೆಲೆ ₹12,40,000 ಆಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.