ADVERTISEMENT

2019ರ ಚಲನಚಿತ್ರ ಪ್ರಶಸ್ತಿ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಅತ್ಯುತ್ತಮ ನಟಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 12:57 IST
Last Updated 22 ಜನವರಿ 2025, 12:57 IST
   

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ 2019ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಿಸಿದ್ದು, ನಟ ಕಿಚ್ಚ ಸುದೀಪ್, ನಟಿ ಅನುಪಮಾ ಗೌಡ, ನಿರ್ದೇಶಕ ಪಿ.ಶೇಷಾದ್ರಿ ಸೇರಿದಂತೆ ಚಿತ್ರರಂಗದ ಹಲವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯ ಸರ್ಕಾರ ಈ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದೆ. ಏಳು ವರ್ಷಗಳ ಬಳಿಕ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಮರುಚಾಲನೆ ದೊರೆತಿದೆ. 25 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದ್ದು, ಸುದೀಪ್ ಅವರಿಗೆ ‘ಪೈಲ್ವಾನ್’ ಚಿತ್ರಕ್ಕಾಗಿ ಅತ್ಯುತ್ತಮ ನಟ, ಅನುಪಮಾ ಗೌಡ ಅವರಿಗೆ ‘ತ್ರಯಂಬಕಂ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಪಿ.ಶೇಷಾದ್ರಿ ನಿರ್ದೇಶನದ ‘ಮೋಹನ ದಾಸ’ ಮೊದಲನೆ ಅತ್ಯುತ್ತಮ ಚಿತ್ರವಾಗಿ, ಡಾರ್ಲಿಂಗ್‌ ಕೃಷ್ಣ ಅವರ ‘ಲವ್ ಮಾಕ್‌ಟೇಲ್‌’, ‘ಅರ್ಘ್ಯಂ’ ಚಿತ್ರಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಗಳಾಗಿ ಹೊರಹೊಮ್ಮಿವೆ. ‘ಕನ್ನೇರಿ’ ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರವಾದರೆ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ vs ಇಂಗ್ಲೆಂಡ್’ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿದೆ.

ADVERTISEMENT

ಜಯಂತ್‌ ಕಾಯ್ಕಿಣಿ ‘ಅತ್ಯುತ್ತಮ ಕಥೆ’, ಬರಗೂರು ರಾಮಚಂದ್ರಪ್ಪ ‘ಅತ್ಯುತ್ತಮ ಸಂಭಾಷಣೆ’, ವಿ.ಹರಿಕೃಷ್ಣ ‘ಅತ್ಯುತ್ತಮ ಸಂಗೀತ’, ಜಿ.ಎಸ್.ಭಾಸ್ಕರ್ ‘ಅತ್ಯುತ್ತಮ ಛಾಯಾಗ್ರಹಣ’ಕ್ಕಾಗಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. 

ಅತ್ಯುತ್ತಮ ಚಿತ್ರ ಮತ್ತು ನಿರ್ದೇಶನ ಪ್ರಶಸ್ತಿಯು ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಅತ್ಯುತ್ತಮ ಎರಡನೇ ಚಿತ್ರ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ, ಅತ್ಯುತ್ತಮ ಮೂರನೇ ಚಿತ್ರ ₹50,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿದೆ. ಅತ್ಯುತ್ತಮ ಸಾಮಾಜಿಕ ಕಾಳಜಿ ಪ್ರಶಸ್ತಿ ₹75,000 ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ಹೊಂದಿವೆ.

ನಿರ್ದೇಶಕ, ನಿರ್ಮಾಪಕ ನಂಜುಡೇಗೌಡ ಅವರ ಅಧ್ಯಕ್ಷತೆಯಲ್ಲಿನ ಆಯ್ಕೆ ಸಲಹಾ ಸಮಿತಿ ಈ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, 172 ಚಿತ್ರಗಳನ್ನು ಆಯ್ಕೆ ಸುತ್ತಿಗೆ ಪರಿಗಣಿಸಲಾಗಿತ್ತು. 

ಅನುಪಮಾ ಗೌಡ

2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ಸಂಪೂರ್ಣ ವಿವರ:

ಮೊದಲನೇ ಅತ್ಯುತ್ತಮ ಚಿತ್ರ: ಮೋಹನದಾಸ
ನಿರ್ಮಾಪಕ: ಮಿತ್ರಚಿತ್ರ
ನಿರ್ದೇಶಕ:  ಪಿ. ಶೇಷಾದ್ರಿ 

ಎರಡನೇ ಅತ್ಯುತ್ತಮ ಚಿತ್ರ: ಲವ್ ಮಾಕ್‌ಟೈಲ್‌
ನಿರ್ಮಾಪಕ: ಕೃಷ್ಣ ಟಾಕೀಸ್, ಎ.ನಾಗಪ್ಪ
ನಿರ್ದೇಶಕ: ಡಾರ್ಲಿಂಗ್ ಕೃಷ್ಣ 

3 ಮೂರನೇ ಅತ್ಯುತ್ತಮ ಚಿತ್ರ: ಅರ್ಘ್ಯಂ
ನಿರ್ಮಾಪಕ: ಪರಮೇಶ್ವರಿ ಆರ್ಟ್ಸ್‌, ವೈ.ಶ್ರೀನಿವಾಸ್‌
ನಿರ್ದೇಶಕ: ವೈ. ಶ್ರೀನಿವಾಸ್

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕನ್ನೇರಿ
ನಿರ್ಮಾಪಕ: ಬುಡ್ಡಿದೀಪ ಸಿನಿಮಾ ಹೌಸ್, ಮಂಜುನಾಥ್‌ ಎನ್‌.
ನಿರ್ದೇಶಕ: ಮಂಜುನಾಥ್‌ ಎನ್‌.

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಇಂಡಿಯಾ v/s ಇಂಗ್ಲೆಂಡ್
ನಿರ್ಮಾಪಕ: ನಾಗತಿಹಳ್ಳಿ ಸಿನಿ ಕಂಬೈನ್ಸ್, ಶ್ರೀ ವೈ.ಎನ್.ಶಂಕರೇಗೌಡ
ನಿರ್ದೇಶಕ: ನಾಗತಿಹಳ್ಳಿ ಚಂದ್ರಶೇಖರ್

ಅತ್ಯುತ್ತಮ ಮಕ್ಕಳ ಚಿತ್ರ: ಎಲ್ಲಿ ಆಡೋದು ನಾವು ಎಲ್ಲಿ ಆಡೋದು
ನಿರ್ಮಾಪಕ: ಎಸ್‌ಆರ್‌ ಎಂಟರ್‌ಪ್ರೈಸಸ್‌, ಶ್ರೀನಿವಾಸ್‌ ಡಿ.
ನಿರ್ದೇಶಕ: ಜಿ. ಅರುಣ್ ಕುಮಾರ್ 

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಗೋಪಾಲಗಾಂಧಿ
ನಿರ್ಮಾಪಕ: ರೇವಣ ಸಿದ್ದೇಶ್ವರ ಮೂವೀಸ್, ಎಸ್‌.ಅಶೋಕ್‌ ರಾವ್‌
ನಿರ್ದೇಶಕ: ನಾಗೇಶ್ ಎನ್.

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಟ್ರಿಪಲ್ ತಲಾಕ್ (ಬ್ಯಾರಿ ಭಾಷೆ)
ನಿರ್ಮಾಪಕ: ಗುಲ್ವಾಡಿ ಟಾಕೀಸ್‌, ಯಾಕೂಬ್ ಖಾದರ್ ಗುಲ್ವಾಡಿ
ನಿರ್ದೇಶಕ: ಯಾಕೂಬ್ ಖಾದರ್ ಗುಲ್ವಾಡಿ

ಅತ್ಯುತ್ತಮ ನಟ: ಕಿಚ್ಚ ಸುದೀಪ್ 
ಚಿತ್ರ: ಪೈಲ್ಮಾನ್

ಅತ್ಯುತ್ತಮ ನಟಿ: ಅನುಪಮಾ ಗೌಡ 
ಚಿತ್ರ: ತ್ರಯಂಬಕಂ

ಅತ್ಯುತ್ತಮ ಪೋಷಕ ನಟ: ತಬಲ ನಾಣಿ 
ಚಿತ್ರ: ಕೆಮಿಸ್ಟ್ರಿ ಆಫ್‌ ಕರಿಯಪ್ಪ

ಅತ್ಯುತ್ತಮ ಪೋಷಕ ನಟಿ: ಅನೂಷಾ ಕೃಷ್ಣ
ಚಿತ್ರ: ಬ್ರಾಹ್ಮಿ

ಅತ್ಯುತ್ತಮ ಕತೆ: ಜಯಂತ್‌ ಕಾಯ್ಕಿಣಿ
ಚಿತ್ರ : ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

ಅತ್ಯುತ್ತಮ ಚಿತ್ರಕತೆ: ಡಾರ್ಲಿಂಗ್ ಕೃಷ್ಣ 
ಚಿತ್ರ: ಲವ್ ಮಾಕ್‌ಟೇಲ್‌

ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ
ಚಿತ್ರ: ಅಮೃತಮತಿ

ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್. ಭಾಸ್ಕರ್
ಚಿತ್ರ: ಮೋಹನದಾಸ

ಅತ್ಯುತ್ತಮ ಸಂಗೀತ ನಿರ್ದೇಶನ: ವಿ. ಹರಿಕೃಷ್ಣ
ಚಿತ್ರ: ಯಜಮಾನ

ಅತ್ಯುತ್ತಮ ಸಂಕಲನ: ಜಿ.ಬಸವರಾಜ್ ಅರಸ್ (ಶಿವು) ಚಿತ್ರ: ಝಾನ್ಸಿ ಐ.ಪಿ.ಎಸ್‌

ಅತ್ಯುತ್ತಮ ಬಾಲ ನಟ: ಮಾಸ್ಟರ್ ಪ್ರೀತಂ
ಚಿತ್ರ: ಮಿಂಚುಹುಳ

ಅತ್ಯುತ್ತಮ ಬಾಲ ನಟಿ: ಬೇಬಿ ವೈಷ್ಣವಿ ಅಡಿಗ
ಚಿತ್ರ: ಸುಗಂಧಿ

ಅತ್ಯುತ್ತಮ ಕಲಾ ನಿರ್ದೇಶನ: ಹೊಸ್ಮನೆ ಮೂರ್ತಿ
ಚಿತ್ರ: ಮೋಹನದಾಸ

ಅತ್ಯುತ್ತಮ ಗೀತ ರಚನೆ: ರಝಾಕ್ ಪುತ್ತೂರು
ಚಿತ್ರ: ಪೆನ್ಸಿಲ್‌ ಬಾಕ್ಸ್‌

ಅತ್ಯುತ್ತಮ ಹಿನ್ನೆಲೆ ಗಾಯಕ: ರಘು ದೀಕ್ಷಿತ್
ಚಿತ್ರ : ಲವ್ ಮಾಕ್‌ಟೇಲ್‌

ಅತ್ಯುತ್ತಮ ಹಿನ್ನೆಲೆ ಗಾಯಕಿ: ಜಯದೇವಿ ಜಿಂಗಮ ಶೆಟ್ಟಿ ಚಿತ್ರ : ರಾಗಭೈರವಿ

ತೀರ್ಪುಗಾರರ ವಿಶೇಷ ಪ್ರಶಸ್ತಿ
ನಿರ್ಮಾಪಕರು: ಪುಟ್ಟಣ್ಣ
ನಿರ್ಮಾಣ ಸಂಸ್ಥೆ: ಇಂಚರ
ಪುಟ್ಟಣ್ಣ ಪ್ರೊಡಕ್ಷನ್ 
ಚಿತ್ರ: ಅಮೃತಮತಿ

ನಿರ್ಮಾಪಕರು: ಬಿ.ಎನ್.ಜಿ. ರಾಜ್‌
ನಿರ್ಮಾಣ ಸಂಸ್ಥೆ: ಬಾಲಾಜಿ ಚಿತ್ರ
ಚಿತ್ರ: ತಮಟೆ ನರಸಿಂಹಯ್ಯ

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಆರ್‌.ಗಂಗಾಧರ್‌
ಚಿತ್ರ: ಮಕ್ಕಡ್ ಮನಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.