ADVERTISEMENT

ಮದುವೆಯಾದ ಬಳಿಕ ಮೊದಲ ಬಾರಿಗೆ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಂಡ ಕತ್ರೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2021, 6:11 IST
Last Updated 24 ಡಿಸೆಂಬರ್ 2021, 6:11 IST
ಕತ್ರೀನಾ ಕೈಫ್‌
ಕತ್ರೀನಾ ಕೈಫ್‌   

ನವದೆಹಲಿ: ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಈ ತಿಂಗಳ ಆರಂಭದಲ್ಲಿ ವೈವಾಹಿಕಜೀವನಕ್ಕೆ ಕಾಲಿಟ್ಟರು.

ಖಾಸಗಿಯಾಗಿ ನಡೆದ ಮದುವೆ ಸಮಾರಂಭವು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುವಂತೆ ಮಾಡಿತ್ತು. ಆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕತ್ರೀನಾ ಹಾಗೂ ವಿಕ್ಕಿ ಮದುವೆಯದ್ದೇ ಸುದ್ದಿಗಳು ಹರಿದಾಡಿದ್ದವು.

ಮದುವೆಯಾಗಿ ಎರಡು ವಾರಗಳ ನಂತರ ಕತ್ರೀನಾ ಕೈಫ್‌ ಮತ್ತೆ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

‘vickat_couple’ ಹೆಸರಿನ ಇನ್‌ಸ್ಟಾಗ್ರಾಮ್‌ ಐಡಿಯಲ್ಲಿ ನಟಿ ಕತ್ರೀನಾ ಶೂಟಿಂಗ್‌ ಸೆಟ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.

ರಾಜಸ್ಥಾನದ ‘ಫೋರ್ಟ್ ಬರ್ವಾರ ಸಿಕ್ಸ್ ಸೆನ್ಸಸ್’ರೆಸಾರ್ಟ್‌ನಲ್ಲಿ ವಿಕ್ಕಿ–ಕತ್ರೀನಾ ಮದುವೆ ಡಿಸೆಂಬರ್ 9ರಂದು ನಡೆದಿತ್ತು.ಮದುವೆಯನ್ನು ಅತ್ಯಂತ ಖಾಸಗಿಯಾಗಿ ನಡೆಸಲಾಗಿದ್ದು, ಸ್ನೇಹಿತರು ಮತ್ತು ಕುಟುಂಬದ ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.