ADVERTISEMENT

ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 12:55 IST
Last Updated 10 ನವೆಂಬರ್ 2025, 12:55 IST
<div class="paragraphs"><p>ಚಿತ್ರ ಕೃಪೆ:&nbsp;Keerthy Suresh</p></div>

ಚಿತ್ರ ಕೃಪೆ: Keerthy Suresh

   

ನವದೆಹಲಿ: ನಟಿ ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಚಿತ್ರವು ನವೆಂಬರ್ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಜೆಕೆ ಚಂದ್ರು ಅವರು ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ಫ್ಯಾಷನ್‌ ಸ್ಟುಡಿಯೋಸ್ ಮತ್ತು ದಿ ರೂಟ್ ಬ್ಯಾನರ್ ಅಡಿಯಲ್ಲಿ ಸುಧನ್ ಸುಂದರಂ ಮತ್ತು ಜಗದೀಶ್ ಪಳನಿಸ್ವಾಮಿ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.

ADVERTISEMENT

ಇತ್ತೀಚೆಗೆ ‘ಉಪ್ಪು ಕಪ್ಪುರಂಬು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಕೀರ್ತಿ ಅವರು, ಇದೀಗ ‘ರಿವಾಲ್ವರ್ ರೀಟಾ’ ಸಿನಿಮಾ ಬಿಡುಗಡೆ ಕುರಿತ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ರಾಧಿಕಾ ಶರತ್‌ಕುಮಾರ್, ರೆಡಿನ್ ಕಿಂಗ್ಸ್‌ಲಿ, ಮೈಮ್ ಗೋಪಿ, ಸೆಂಡ್ರಾಯನ್ ಮತ್ತು ಸೂಪರ್ ಸುಬ್ಬರಾಯನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಳೆದ ವರ್ಷ ವರುಣ್ ಧವನ್ ಮತ್ತು ವಾಮಿಕಾ ಗಬ್ಬಿ ಅಭಿನಯದ ‘ಬೇಬಿ ಜಾನ್’ ಚಿತ್ರದ ಮೂಲಕ ನಟಿ ಕೀರ್ತಿ ಸುರೇಶ್ ಅವರು ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.