
ತ್ರಿಶೂರ್: ಕೇರಳ ಸರ್ಕಾರವು 2024ರ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಿಸಿದೆ. ಮಮ್ಮುಟ್ಟಿ ಅತ್ಯುತ್ತಮ ನಟ, ಶಮ್ಲಾ ಹಮ್ಜಾ (Shamla Hamza) ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದರ ಜತೆಗೆ ಪ್ರೇಕ್ಷಕರ ಮನಗೆದ್ದ ‘ಮಂಜುಮ್ಮೆಲ್ ಬಾಯ್ಸ್‘ ಚಿತ್ರವು ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ.
'ಭ್ರಮಯುಗಂ' ಚಿತ್ರದಲ್ಲಿನ ಕೊಡುಮೊನ್ ಪೊಟ್ಟಿ ಪಾತ್ರಕ್ಕಾಗಿ ಮಮ್ಮುಟ್ಟಿ ಅವರಿಗೆ ಅತ್ಯುತ್ತಮ ನಟ, 'ಫೆಮಿನಿಚಿ ಫಾತಿಮಾ' ಸಿನಿಮಾಕ್ಕಾಗಿ ಶಮ್ಲಾ ಹಮ್ಜಾ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
‘ಮಂಜುಮ್ಮೆಲ್ ಬಾಯ್ಸ್‘ ಚಿತ್ರಕ್ಕೆ ಅತ್ಯುತ್ತಮ ಗೀತರಚನೆಕಾರ, ಅತ್ಯುತ್ತಮ ಕಲಾ ನಿರ್ದೇಶನ, ಅತ್ಯುತ್ತಮ ಧ್ವನಿ ಮತ್ತು ಛಾಯಾಗ್ರಹಣ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.
ಗಿರೀಶ್ ನಿರ್ದೇಶನದ 'ಪ್ರೇಮಲು' – ಅತ್ಯುತ್ತಮ ಜನಪ್ರಿಯ ಚಿತ್ರ
ನಟ ಲಿಜೋಮೊಲ್ ಜೋಸ್ ಅವರ 'ನಾದನ್ನ ಸಂಭವಂ' –ಅತ್ಯುತ್ತಮ ಸಹ ನಟಿ
ಅಜಿಲ್ ಮುಹಮ್ಮದ್ ನಿರ್ದೇಶನದ 'ಫೆಮಿನಿಚಿ ಫಾತಿಮಾ' – ಅತ್ಯುತ್ತಮ ನಿರ್ದೇಶಕ
ಪ್ರಸನ್ನ ವಿಥಾನ್ ಅವರ 'ಪ್ಯಾರಡೈಸ್' – ವಿಶೇಷ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.