ADVERTISEMENT

ಕೆಜಿಎಫ್‌ ಚಾಪ್ಟರ್‌ –2 ಕೇರಳದಲ್ಲಿಯೂ ಸ್ವಾಗತಕ್ಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:06 IST
Last Updated 5 ಜನವರಿ 2021, 12:06 IST
ಕೆಜಿಎಫ್‌ ಚಾಪ್ಟರ್‌ 2 ಮಲೆಯಾಳಂ ಅವತರಣಿಕೆಯ ಪೋಸ್ಟರ್‌(ಹೊಂಬಾಳೆ ಫಿಲ್ಮ್ಸ್‌- ಪ್ರಥ್ವಿರಾಜ್ ಪ್ರೊಡಕ್ಷನ್ಸ್‌ ಟ್ವಿಟರ್‌ ಚಿತ್ರ)
ಕೆಜಿಎಫ್‌ ಚಾಪ್ಟರ್‌ 2 ಮಲೆಯಾಳಂ ಅವತರಣಿಕೆಯ ಪೋಸ್ಟರ್‌(ಹೊಂಬಾಳೆ ಫಿಲ್ಮ್ಸ್‌- ಪ್ರಥ್ವಿರಾಜ್ ಪ್ರೊಡಕ್ಷನ್ಸ್‌ ಟ್ವಿಟರ್‌ ಚಿತ್ರ)   

ಕೇರಳದಲ್ಲಿಯೂ ರಾಖಿ ಬಾಯ್‌ನ ಎರಡನೇ ಅವತಾರಕ್ಕೆ ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಭರ್ಜರಿಯಾಗಿ ಆರಂಭಗೊಂಡಿದೆ.

ಮಲೆಯಾಳಂನಲ್ಲಿ ಪ್ರಥ್ವಿರಾಜ್‌ ಸುಕುಮಾರನ್‌ ಅವರು ತಮ್ಮ ಪ್ರಥ್ವಿರಾಜ್‌ ಪ್ರೊಡಕ್ಷನ್ಸ್‌ ಸಂಸ್ಥೆಯ ಮೂಲಕ ಕೇರಳದಲ್ಲಿ ‘ಕೆಜಿಎಫ್‌ ಚಾಪ್ಟರ್‌ 2’ ಸಿನಿಮಾ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮಲೆಯಾಳಂನಲ್ಲಿ ಕೆಜಿಎಫ್‌ ರಾಖಿ ಬಾಯ್‌ ತೆರೆದುಕೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಸುಕುಮಾರನ್‌ ಅವರು ಇತ್ತೀಚೆಗಷ್ಟೇ ಮಲೆಯಾಳಂನ ತನಿಖೆ– ಥ್ರಿಲ್ಲರ್‌ ಕಥಾ ಹಂದರದ ಚಿತ್ರ ‘ಕೋಲ್ಡ್‌ ಕೇಸ್‌’ನ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ.

ADVERTISEMENT

ಚಿತ್ರದ ಎಲ್ಲ ಕಾರ್ಯಗಳು ಬಹುತೇಕ ಮುಕ್ತಾಯಗೊಂಡಿದೆ. ಜ. 8ರಂದು ಯೂನಿವರ್ಸಲ್‌ ಟೀಸರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಬಿಡುಗಡೆಯ ದಿನಾಂಕ ಮಾತ್ರ ಇನ್ನಷ್ಟೇ ಗೊತ್ತಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.