ADVERTISEMENT

ಕೆಜಿಎಫ್‌ ಚಾಪ್ಟರ್‌-2: ನಾಳೆ ಹೊಸ ಸುದ್ದಿ!?

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 7:49 IST
Last Updated 20 ಡಿಸೆಂಬರ್ 2020, 7:49 IST
ಹೈದರಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ಕೆಜಿಎಫ್‌ ಚಾಪ್ಟರ್‌ –2 ಚಿತ್ರ ತಂಡ ಹಂಚಿಕೊಂಡಿರುವ ಗ್ರೂಪ್‌ ಫೋಟೋ (ಟ್ವಿಟರ್‌ ಚಿತ್ರ)
ಹೈದರಾಬಾದ್‌ನಲ್ಲಿ ಚಿತ್ರೀಕರಣ ಮುಗಿಸಿದ ಬಳಿಕ ಕೆಜಿಎಫ್‌ ಚಾಪ್ಟರ್‌ –2 ಚಿತ್ರ ತಂಡ ಹಂಚಿಕೊಂಡಿರುವ ಗ್ರೂಪ್‌ ಫೋಟೋ (ಟ್ವಿಟರ್‌ ಚಿತ್ರ)   

ಕೆಜಿಎಫ್‌ ಚಿತ್ರತಂಡ ಹೊಸ ಸುದ್ದಿಯನ್ನು ನಾಳೆ (ಡಿ. 21) ಕೊಡಲಿದೆಯಂತೆ. ಅಂದಹಾಗೆ ಕೆಜಿಎಫ್‌ ಚಾಪ್ಟರ್‌–2 ಚಿತ್ರದ ಕ್ಲೈಮಾಕ್ಸ್‌ ಚಿತ್ರೀಕರಣ ಶನಿವಾರ ಹೈದರಾಬಾದ್‌ನಲ್ಲಿ ಪೂರ್ಣಗೊಂಡಿದೆ. ಆ ಸಂಭ್ರಮದಲ್ಲಿ ಚಿತ್ರತಂಡ ಗ್ರೂಪ್‌ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಚಿತ್ರದ ‘ಅಧೀರ’ ಪಾತ್ರಧಾರಿ ಸಂಜಯದತ್‌, ನಿರ್ದೇಶಕ ಪ್ರಶಾಂತ್‌ ನೀಲ್‌ ಸೇರಿದಂತೆ ತಂಡದ ತಂತ್ರಜ್ಞರು, ಸಿಬ್ಬಂದಿ ಈ ಗ್ರೂಪ್‌ ಫೋಟೋದಲ್ಲಿ ಇದ್ದಾರೆ.

ಕೆಜಿಎಫ್‌ ಚಾಪ್ಟರ್‌ –2 ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ನಾವು ಡಿ. 21ರಂದು ಅಚ್ಚರಿಯ ಸುದ್ದಿಯೊಂದನ್ನು ಕೊಡುತ್ತೇವೆ. ಅದೇನೆಂದು ನಾಳೆ ಬೆಳಿಗ್ಗೆ 10.08ಕ್ಕೆ ಗೊತ್ತಾಗಲಿದೆ. ಇದುವರೆಗೆ ತಾಳ್ಮೆಯಿಂದಿದ್ದು ನಮ್ಮನ್ನು ಬೆಂಬಲಿಸಿದ್ದಕ್ಕೆ ಧನ್ಯವಾದಗಳು ಎಂದು ಚಿತ್ರ ತಂಡದ ಸದಸ್ಯರು ಸಂದೇಶ ಹಂಚಿಕೊಂಡಿದ್ದಾರೆ.

ಚಿತ್ರದ ಟೀಸರ್ ಜನವರಿ 8ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಹಾಗೆ ಅಂದು ಚಿತ್ರದ ನಾಯಕ ನಟ ಯಶ್‌ ಅವರ ಜನ್ಮದಿನ. ಚಿತ್ರದಲ್ಲಿ ರಮೀಕಾ ಸೇನ್, ಶ್ರೀನಿಧಿ ಶೆಟ್ಟಿ, ಪ್ರಶಾಂತ್ ರಾಜ್, ಅನಂತ್‌ನಾಗ್, ವಸಿಷ್ಠ ಎನ್ ಸಿಂಹ, ರವೀನಾ ಟಂಡನ್ ತಾರಾಗಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.