ADVERTISEMENT

ಶೇರ್‌ಶಾ ಚಿತ್ರದ ಪ್ರಚಾರದಲ್ಲಿ ಕಿಯಾರ ಅಡ್ವಾಣಿ ಜತೆ ಸಿದ್ಧಾರ್ಥ್ ಮಲ್ಹೋತ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಆಗಸ್ಟ್ 2021, 10:04 IST
Last Updated 8 ಆಗಸ್ಟ್ 2021, 10:04 IST
ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರ ಅಡ್ವಾಣಿ- ಇನ್‌ಸ್ಟಾಗ್ರಾಂ ಪೋಸ್ಟ್
ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರ ಅಡ್ವಾಣಿ- ಇನ್‌ಸ್ಟಾಗ್ರಾಂ ಪೋಸ್ಟ್   

ಬೆಂಗಳೂರು: ಬಾಲಿವುಡ್‌ನ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರ ಅಡ್ವಾಣಿ ಅಭಿನಯದ ಶೇರ್‌ಶಾ ಚಿತ್ರ ತೆರೆಕಾಣಲು ಸಜ್ಜಾಗಿದೆ.

ಸಿದ್ಧಾರ್ಥ್ ಹಾಗೂ ಕಿಯಾರ ಇಬ್ಬರೂ ಜತೆಯಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ.

ಶೇರ್‌ಶಾ ಚಿತ್ರಕ್ಕೆ ಸಂಬಂಧಿಸಿ ನಟಿ ಕಿಯಾರಾ ಅಡ್ವಾಣಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ADVERTISEMENT

ಈ ವಿಡಿಯೊದಲ್ಲಿ ಸಿದ್ಧಾರ್ಥ ಬಳಿ ನಟಿ ಕಿಯಾರ ನಡೆದು ಬರುತ್ತಿರುವ ದೃಶ್ಯವಿದೆ. ಕಿಯಾರಾಳನ್ನು ನಟ ಸಿದ್ಧಾರ್ಥ ನೋಡುತ್ತಾ, ಆಕೆಯೊಂದಿಗೆ ಮುಂದೆ ಹೆಜ್ಜೆ ಹಾಕುತ್ತಾರೆ. ಈ ವಿಡಿಯೊವನ್ನು ಕಿಯಾರ ಮತ್ತು ಸಿದ್ಧಾರ್ಥ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಈ ವಿಡಿಯೊಗೆ ‘ರಾಂಜಾ’ ಎಂಬ ಅಡಿಬರಹ ನೀಡಿರುವ ಕಿಯಾರ, ಅದರ ಜತೆಗೆ ಹೃದಯದ ಎಮೋಜಿ ಕೂಡ ಬಳಸಿದ್ದಾರೆ.

ಕಾರ್ಗಿಲ್ ಹೀರೊ, ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರ ಕಥೆಯನ್ನೊಳಗೊಂಡ ಶೇರ್‌ಶಾ ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.