ADVERTISEMENT

ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್' ಚಿತ್ರಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ನವೆಂಬರ್ 2025, 12:40 IST
Last Updated 20 ನವೆಂಬರ್ 2025, 12:40 IST
   


ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್' ಚಿತ್ರ ವೀಕ್ಷಿಸಿದ ನಟ ಕಿಚ್ಚ ಸುದೀಪ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

‘ಬ್ರ್ಯಾಟ್’  ಚಿತ್ರ ಕುರಿತು ಕಿಚ್ಚ ಸುದೀಪ್ ಅವರು, ‘ಚಿತ್ರಕಥೆ, ನಿರ್ದೇಶನ, ನಟನೆ ಎಲ್ಲಾವೂ ಅದ್ಭುತವಾಗಿ ಮೂಡಿ ಬಂದಿದೆ.  ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್ ತುಂಬಾ ಇಷ್ಟವಾಯಿತು. ಈ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕೃಷ್ಣ, ನಟಿ ಮನಿಶಾ ಕಂದಕೂರ್ ಹಾಗೂ ಪೋಷಕ ಪಾತ್ರಧಾರಿಗಳು ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ‘.  ನನ್ನ ಸಹೋದರ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಕೂಡ ಚೆನ್ನಾಗಿ ಮೂಡಿ ಬಂದಿದೆ. ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ’  ಎಂದು ಬರೆದುಕೊಂಡಿದ್ದಾರೆ.

ಬೆಟ್ಟಿಂಗ್‌ನಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಪದೇ ಪದೇ ಕೇಳಿಬರುತ್ತಿರುವ ಸಂದರ್ಭದಲ್ಲೇ ಯುವ ಜನತೆಯನ್ನು ಆಫ್‌ಲೈನ್ ಬೆಟ್ಟಿಂಗ್‌ಗೆ ಪ್ರಚೋದಿಸುವ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡರೆ ಕ್ಷಣ ಮಾತ್ರದಲ್ಲಿ ಲಕ್ಷಾಂತರ ರೂಪಾಯಿ ಮಾಡಬಹುದು, ಬೆಟ್ಟಿಂಗ್ ಮಾಡುತ್ತಾ ತನ್ನೊಳಗಿನ ಕೌಶಲ ಉಪಯೋಗಿಸಿದರೆ ಪ್ರಾಮಾಣಿಕವಾಗಿರುವ ಅಪ್ಪನನ್ನೂ ಒಳಗೊಂಡಂತೆ ಯಾರನ್ನಾದರೂ ಯಾಮಾರಿಸಬಹುದು ಎನ್ನುವ ಅಂಶವೇ ಸಿನಿಮಾದಲ್ಲಿ ಪ್ರಧಾನವಾಗಿದೆ.

ಚಿತ್ರದ ‘ಗಂಗಿ ಗಂಗಿ’,  ‘ನಾನೇ ನೀನಂತೆ’ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರವನ್ನು ಡಾಲ್ವಿನ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ  ಮಂಜುನಾಥ್ ಕಂದಕೂರ್ ನಿರ್ಮಿಸಿದ್ದರೆ,  ಶಶಾಂಕ್ ನಿರ್ದೇಶನ ಮಾಡಿದ್ದಾರೆ.

ರಮೇಶ್ ಇಂದಿರಾ, ಡ್ರಾಗನ್ ಮಂಜು, ಅಚ್ಚುತ್ ಕುಮಾರ್ ಸೇರಿದಂತೆ ಅನೇಕರು ‘ಬ್ರ್ಯಾಟ್‘ ಚಿತ್ರದಲ್ಲಿ   ಅಭಿನಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.