ADVERTISEMENT

ಲ್ಯಾಂಡ್‌ಲಾರ್ಡ್ ತೆರೆ ಹಿಂದಿನ ಭಾವುಕ ಕ್ಷಣ ಹಂಚಿಕೊಂಡ ದುನಿಯಾ ವಿಜಯ್ ಮಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 10:32 IST
Last Updated 27 ಜನವರಿ 2026, 10:32 IST
<div class="paragraphs"><p>ದುನಿಯಾ ವಿಜಯ್ ಮಗಳು ರಿತನ್ಯಾ</p></div>

ದುನಿಯಾ ವಿಜಯ್ ಮಗಳು ರಿತನ್ಯಾ

   

ಚಿತ್ರ: ಇನ್‌ಸ್ಟಾಗ್ರಾಂ

ನಟ ದುನಿಯಾ ವಿಜಯ್‌, ನಟಿ ರಚಿತಾ ರಾಮ್‌, ರಾಜ್‌ ಬಿ ಶೆಟ್ಟಿ ಅಭಿನಯದಲ್ಲಿ ಮೂಡಿಬಂದ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ಜ.23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಲ್ಯಾಂಡ್‌ಲಾರ್ಡ್‌ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದರು.

ADVERTISEMENT

ದುನಿಯಾ ವಿಜಯ್ ಮಗಳು ರಿತನ್ಯಾ

ಜಡೇಶ್ ಹಂಪಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಲ್ಯಾಂಡ್‌ಲಾರ್ಡ್ ಸಿನಿಮಾದ ಮೂಲಕ ನಟ ದುನಿಯಾ ವಿಜಯ್ ಹಿರಿಯ ಪುತ್ರಿ ರಿತನ್ಯಾ ವಿಜಯ್‌ಕುಮಾರ್ ಚಂದನವನಕ್ಕೆ ಪದಾರ್ಪಣೆ ಮಾಡಿದ್ದಾರೆ.

ದುನಿಯಾ ವಿಜಯ್ ಮಗಳು ರಿತನ್ಯಾ

ಈ ಚಿತ್ರದಲ್ಲಿ ಅವರು ದುನಿಯಾ ವಿಜಯ್‌ ಮಗಳ ಪಾತ್ರದಲ್ಲಿ ನಟಿಸಿದ್ದು, ‘ಭಾಗ್ಯ’ ಎಂಬ ಪಾತ್ರಕ್ಕೆ ಜೀವತುಂಬಿದ್ದಾರೆ. ರಿತನ್ಯಾ ಅವರು ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತನ್ಯಾ ವಿಜಯ್‌ಕುಮಾರ್ ಹಾಗೂ ಶಿಶಿರ್ ಬೈಕಾಡಿ ಕಾಣಿಸಿಕೊಂಡಿರುವ ‘ರೋಮಾಂಚಕ’ ಹಾಡು ಆನಂದ್ ಎಲ್ಲರ ಗಮನ ಸೆಳೆದಿತ್ತು.

ದುನಿಯಾ ವಿಜಯ್ ಮಗಳು ರಿತನ್ಯಾ

ಇದೀಗ ರಿತನ್ಯಾ ವಿಜಯ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಲ್ಯಾಂಡ್‌ಲಾರ್ಡ್ ಸಿನಿಮಾದ ತೆರೆ ಹಿಂದಿನ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಒಂದೇ ಚಿತ್ರದಲ್ಲಿ ಹಲವು ಭಾವನೆಗಳು, ಸಂತೋಷ, ತುಂಬಾ ಅಮೂಲ್ಯ ಕ್ಷಣಗಳು’ ಎಂದು ಬರೆದುಕೊಂಡಿದ್ದಾರೆ.

ದುನಿಯಾ ವಿಜಯ್ ಮಗಳು ರಿತನ್ಯಾ

ಮತ್ತೊಂದು ಪೋಸ್ಟ್‌ನಲ್ಲಿ ‘ಎಲ್ಲರ ಪ್ರೀತಿ ಮತ್ತು ಪ್ರತಿಕ್ರಿಯೆಯಿಂದ ತುಂಬಿ ತುಳುಕುತ್ತಿದೆ. ನಿಜವಾಗಿಯೂ ಕೃತಜ್ಞತೆಗಳು. ಈ ಪಾತ್ರವನ್ನು ನಿರ್ವಹಿಸುವುದು ನನ್ನ ಚೊಚ್ಚಲ ನಟನ ಕನಸಾಗಿತ್ತು. ನನ್ನೊಂದಿಗೆ ಶಾಶ್ವತವಾಗಿ ಉಳಿಯುವ ಪಾತ್ರ ಇದು’ ಎಂದು ಬರೆದುಕೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುತ್ತಿರುವ ಪ್ರೇಕ್ಷಕರು

ವಿಶೇಷ ಎಂಬಂತೆ ಸಿನಿಮಾ ಚಿತ್ರೀಕರಣದಲ್ಲಿ ತಂದೆಯ ಜೊತೆಗೆ ನಟಿಸಿದ ಖುಷಿಯಲ್ಲಿದ್ದಾರೆ ರಿತನ್ಯಾ ವಿಜಯ್‌ಕುಮಾರ್. ಜೊತೆಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದ ದುನಿಯಾ ವಿಜಯ್‌ ಅವರ ಫೋಟೊವನ್ನು ಮಗಳು ಹಂಚಿಕೊಂಡಿದ್ದಾರೆ.

ದುನಿಯಾ ವಿಜಯ್ ಮಗಳು ರಿತನ್ಯಾ

ಇನ್ನು, ಲ್ಯಾಂಡ್‌ಲ್ಯಾರ್ಡ್ ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಭೂಮಾಲಿಕರ ದರ್ಪ, ಜೀತದಾಳುಗಳ ನೋವಿನ ಕತೆಯನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಸುಂದರ ಹಾಡುಗಳು ಮೂಡಿಬಂದಿವೆ. ಕೆ.ವಿ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಅವರು ನಿರ್ಮಾಣ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಮಗಳು ರಿತನ್ಯಾ

ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್, ದುನಿಯಾ ವಿಜಯ್‌, ಮಗಳು ರಿತನ್ಯಾ, ಶಿಶಿರ್ ಬೈಕಾಡಿ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ಕಲಾವಿದರು ನಟಿಸಿದ್ದಾರೆ.

ದುನಿಯಾ ವಿಜಯ್ ಮಗಳು ರಿತನ್ಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.