
ಲವ್ ಮಾಕ್ಟೇಲ್ 3
ಹೊಸ ವರ್ಷದ ದಿನವೇ ನಟ ಡಾರ್ಲಿಂಗ್ ಕೃಷ್ಣ ನಟನೆಯ ‘ಲವ್ ಮಾಕ್ಟೇಲ್ 3’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಲವ್ ಮಾಕ್ಟೇಲ್ ಮೂರನೇ ಭಾಗ ತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಲವ್ ಮಾಕ್ಟೇಲ್ 3 ಪೋಸ್ಟರ್ ಅನ್ನು ಬಿಡುಗಡೆ ಮಾಡಿ ‘ಕಾಯುವಿಕೆ ಕೊನೆಗೂ ಮುಗಿದಿದೆ. ಲವ್ ಮಾಕ್ಟೇಲ್ ಏ.10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾದ ಲಿರಿಕಲ್ ಹಾಡೊಂದನ್ನು ಡಾರ್ಲಿಂಗ್ ಕಷ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ನಿರ್ದೇಶಕ ಶಶಾಂಕ್ ಬರೆದ ಹಾಡಿಗೆ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ದನಿಯಾಗಿದ್ದರು.
ಈ ಸಿನಿಮಾವು ಅಪ್ಪ–ಮಗಳ ಭಾವನಾತ್ಮಕ ಕಥೆಯನ್ನು ಒಳಗೊಂಡಿದೆ. ಅವರ ನಡುವಿನ ಭಾವನಾತ್ಮಕ ಸವಾರಿಯ ಕಥನವಿದು. ಇದು ‘ಆದಿ’ಯ ಪಯಣವೂ ಹೌದು. ಎರಡನೇ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದತ್ತು ಮಗಳ ಪಾತ್ರ ಇಲ್ಲಿ ಮುಂದುವರಿದಿದೆ. ಮಗಳಾಗಿ ಸಂವೃತಾ ಈ ಸಿನಿಮಾದಲ್ಲಿ ನಟಿಸಿದ್ದಾಳೆ. ಇನ್ನು, ಈ ಸಿನಿಮಾದ ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊ ಖರೀಸಿದಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೊತೆಗೂಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.