ADVERTISEMENT

ಆ್ಯಪಲ್‌ ಕಂಪೆನಿ ಸಿಇಓಗೆ ‘ವಡಾ ಪಾವ್‌‘ ರುಚಿ ತೋರಿಸಿದ ಮಾಧುರಿ ದೀಕ್ಷಿತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2023, 11:00 IST
Last Updated 18 ಏಪ್ರಿಲ್ 2023, 11:00 IST
ಚಿತ್ರ ಕೃಪೆ : (Twitter/@MadhuriDixit)
ಚಿತ್ರ ಕೃಪೆ : (Twitter/@MadhuriDixit)   

ಮುಂಬೈ : ಆ್ಯಪಲ್‌ ಕಂಪೆನಿ ಸಿಇಓ ಟಿಮ್‌ ಕುಕ್‌ ಅವರಿಗೆ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮುಂಬೈನ ಜನಪ್ರಿಯ ಗಲ್ಲಿ ತಿನಿಸಾದ ‘ವಡಾ ಪಾವ್‌‘ನ ರುಚಿ ತೋರಿಸಿದ್ದು, ಟಿಮ್‌ ಕುಕ್‌ ‘ಅದ್ಭುತ‘ ಎಂದು ಹೇಳಿದ್ದಾರೆ.

ಆ್ಯಪಲ್‌ ಕಂಪೆನಿಯು ಮೊತ್ತಮೊದಲ ಬಾರಿಗೆ ಭಾರತದಲ್ಲಿ ತನ್ನ ಮೊದಲ ರಿಟೇಲ್‌ ಸ್ಪೋರ್‌ ಅನ್ನು ಮುಂಬೈನಲ್ಲಿ ತೆರೆದಿದ್ದು, ಮಂಗಳವಾರ ಸ್ಪೋರ್‌ನ ಉದ್ಘಾಟನೆಯನ್ನು ಮಾಡಿದೆ. ಶೀಘ್ರದಲ್ಲೇ ಮತ್ತೊಂದು ಸ್ಟೋರ್‌ ಅನ್ನು ದೆಹಲಿಯಲ್ಲಿ ತೆರೆಯಲು ನಿರ್ಧರಿಸಿದೆ. ಸ್ಟೋರ್‌ನ ಉದ್ಘಾಟನೆಗೆ ಆಗಮಿಸಿದ ಸಿಇಓ ಟಿಮ್‌ ಕುಕ್‌ ಮುಂಬೈನ ಸ್ಥಳೀಯ ಹೋಟೆಲ್‌ವೊಂದರಲ್ಲಿ ನಟಿಯ ಜೊತೆಗೆ ‘ವಡಾ ಪಾವ್‌‘ ರುಚಿ ನೋಡಿದ್ದಾರೆ.

ಟಿಮ್‌ ಕುಕ್‌ ಜೊತೆ ವಡಾ ಪಾವ್‌ ಸವಿಯುತ್ತಿರುವ ಪೋಟೊವನ್ನು ನಟಿ ಮಾಧುರಿ ದೀಕ್ಷಿತ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಮುಂಬೈಗೆ ಸ್ವಾಗತಿಸಲು ವಡಾ ಪಾವ್‌ಗಿಂತ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಾಧ್ಯವಿಲ್ಲ‘ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಮ್ ಕುಕ್‌, ‘ವಡಾ ಪಾವ್ ಅನ್ನು ಪರಿಚಯಿಸಿದಕ್ಕೆ ಧನ್ಯವಾದಗಳು. ನಿಜಕ್ಕೂ ವಡಾ ಪಾವ್‌ ತುಂಬಾ ರುಚಿಕರವಾಗಿತ್ತು‘ ಎಂದು ಹೇಳಿದ್ದಾರೆ.

ಮಾಧುರಿ ದೀಕ್ಷಿತ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಮಾಧುರಿ ದೀಕ್ಷಿತ್‌ ಅವರು ಅಭಿನಯಿಸಿದ 'ಖಳ ನಾಯಕ್‌' ಚಿತ್ರದ ಜನಪ್ರಿಯ ‘ಚೋಲಿ ಕೆ ಪೀಚೆ ಕ್ಯಾ ಹೆ‘ ಹಾಡಿನ ಮೊದಲ ಸಾಹಿತ್ಯವಾದ ‘ಕುಕ್‌ ಕುಕ್‌ ಕುಕ್‌......‘ ಸಾಲನ್ನು ಬರೆದು ನಟಿಯ ಕಾಲೆಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.