ADVERTISEMENT

ಅರ್ಜುನ್ ಕಪೂರ್‌ ‘ಅರೆ ನಗ್ನ‘ ಫೋಟೊ ಪೋಸ್ಟ್‌ ಮಾಡಿದ ಮಲೈಕಾ; ಟ್ರೋಲ್‌ ನಂತರ ಡಿಲೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2023, 13:08 IST
Last Updated 29 ಮೇ 2023, 13:08 IST
   

ನಟನೆ ಜೊತೆ ಜೊತೆಯಲ್ಲಿಯೇ ಫ್ಯಾಷನ್‌ ಲೋಕದಲ್ಲಿ ಬ್ಯುಸಿಯಾಗಿರುವ ಬಾಲಿವುಡ್‌ ನಟಿ ಮಲೈಕಾ ಅರೋರಾ ಇದೀಗ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ತನ್ನ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಅವರ ‘ಅರೆ ನಗ್ನ‘ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಟ್ರೋಲ್‌ಗಳ ಬಾಯಿಗೆ ಆಹಾರವಾಗಿದ್ದಾರೆ.

ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಲೈಕಾ ಅರೋರಾ 17 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ಅರ್ಬಾಜ್‌ ಖಾನ್‌ ಮತ್ತು ಮಲೈಕಾ ಅವರಿಗೆ ಒಬ್ಬ ಗಂಡು ಮಗನಿದ್ದಾನೆ. ವಿಚ್ಛೇದನ ನಂತರವೂ ಅವರು ಹಿಂದಿ ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ‘ಖಾನ್‌‘ ಸರ್‌ನೇಮ್‌ಗೆ ಭಾರಿ ಬೇಡಿಕೆಯಿದೆ ಎಂಬ ನಂಬಿಕೆಯ ನಡುವೆಯೂ ತಮ್ಮ ಹೆಸರಿನ ಹಿಂದೆ ಇದ್ದ ‘ಖಾನ್‌‘ ಸರ್‌ನೇಮ್‌ನ್ನು ತೆಗೆಯುವ ಮೂಲಕ ದಿಟ್ಟತನ ಮೆರೆದಿದ್ದರು. ಆ ಮೂಲಕ ‘ಬೋಲ್ಡ್‌‘ ನಟಿ ಎಂದು ಹೆಸರು ಪಡೆದುಕೊಂಡಿದ್ದರು.

ವಿಚ್ಛೇದನ ನಂತರ ಬಾಲಿವುಡ್ ನಟ ಅರ್ಜುನ್‌ ಕಪೂರ್‌ ಜೊತೆ ಮಲೈಕಾ ಅರೋರಾ ಡೇಟಿಂಗ್‌ ನಡೆಸುತ್ತಿದ್ದಾರೆ. ಅರ್ಜುನ್ ಕಪೂರ್ ಹಾಗೂ ಮಲೈಕಾ ನಡುವೆ ಸರಿಸುಮಾರು 12 ವರ್ಷಗಳ ವಯಸ್ಸಿನ ಅಂತರವಿದೆ. ಇದೇ ವಿಷಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಲೈಕಾ ಟ್ರೋಲ್‌ ಆಗಿದ್ದರು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಮಲೈಕಾ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ADVERTISEMENT

ತಮ್ಮ ಜೀವನದ ವೈಯಕ್ತಿಕ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿರುವ ಮಲೈಕಾ ಇಂದು ಅರ್ಜುನ್ ಕಪೂರ್‌ ಅವರ ಅರೆ ನಗ್ನ ಫೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದರು. ‘ಮೈ ವೆರಿ ಒನ್ ಲೆಝಿ ಬಾಯ್‌‘ ಎಂದು ಬರೆದುಕೊಂಡಿದ್ದರು. ಈ ಫೋಟೊವನ್ನು ಅರ್ಜುನ್ ಕಪೂರ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು.

ಅರೆ ನಗ್ನ ಸ್ಥಿತಿಯಲ್ಲಿ ಕೋಚ್‌ ಮೇಲೆ ಕುಳಿತ ಅರ್ಜುನ್ ಕಪೂರ್‌ ಅವರ ಫೋಟೊವನ್ನು ನೋಡಿದ ನೆಟ್ಟಿಗರು ನಟಿಯನ್ನು ಟ್ರೋಲ್‌ ಮಾಡಿದ್ದಾರೆ. ‘ಕುಡಿದು ಬಂದು ಪೋಸ್ಟ್‌ ಮಾಡಿದ್ದೀರಾ?‘ ಎಂದು ಕೇಳಿದ್ದಾರೆ.

ಟ್ರೋಲ್‌ ಆಗುತ್ತಲೆ ಮಲೈಕಾ ಇನ್‌ಸ್ಟಾಗ್ರಾಂ ಸ್ಟೋರಿಯಿಂದ ಫೋಟೊವನ್ನು ಡಿಲೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.