ಮೋಹನ್‌ಲಾಲ್, ಮಮ್ಮುಟ್ಟಿ
(ಚಿತ್ರ ಕೃಪೆ: ಪಿಟಿಐ, X/@Mohanlal)
ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿರುವ ಮಲಯಾಳಂ ನಟ ಮೋಹನ್‌ಲಾಲ್, ದೇವರ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗದ ಮತ್ತೊಬ್ಬ ನಟ ಮಮ್ಮುಟ್ಟಿ ಅವರಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ. ಮೋಹನ್‌ಲಾಲ್ ಅವರು ಮಂಗಳವಾರ (ಮಾರ್ಚ್ 18) ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಪಂಪಾದಲ್ಲಿ ಇರುಮುಡಿ ಕಟ್ಟುವ ಮೂಲಕ ಮೆಟ್ಟಿಲುಗಳನ್ನು ಏರಿ ಮೋಹನ್‌ಲಾಲ್ ಶಬರಿಮಲೆಗೆ ತೆರಳಿದ್ದಾರೆ.
ಮಲಯಾಳಂ ಚಿತ್ರರಂಗದ ಪ್ರಖ್ಯಾತ, ಜನಪ್ರಿಯ ನಟರಾಗಿರುವ ಹೊರತಾಗಿಯೂ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಇಬ್ಬರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.
ಬಹುನಿರೀಕ್ಷಿತ 'ಎಂಪುರಾನ್' ಬಿಡುಗಡೆಗೆ ಕೆಲವೇ ದಿನಗಳಿರುವಂತೆಯೇ ಮೋಹನ್‌ಲಾಲ್ ಶಬರಿಮಲೆಗೆ ಭೇಟಿ ನೀಡಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮೋಹನ್‌ಲಾಲ್ ಅಭಿನಯದ 'ಎಲ್–2: ಎಂಪುರಾನ್' ಮಾರ್ಚ್ 27ರಂದು ತೆರೆಕಾಣಲಿದೆ. 2019ರಲ್ಲಿ ತೆರೆಕಂಡಿದ್ದ, ಭಾರಿ ಯಶಸ್ಸು ಕಂಡಿದ್ದ'ಲೂಸಿಫರ್' ಚಿತ್ರದ ಎರಡನೇ ಭಾಗ ಇದಾಗಿದೆ.
ಶಬರಿಮಲೆಗೆ ನಟ ಮೋಹನ್‌ಲಾಲ್ ಭೇಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.