ADVERTISEMENT

ನಟಿಗೆ ಕಿರುಕುಳ ಆರೋಪ: ಮಲಯಾಳಂ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ FIR

ಪಿಟಿಐ
Published 28 ಜನವರಿ 2025, 6:47 IST
Last Updated 28 ಜನವರಿ 2025, 6:47 IST
<div class="paragraphs"><p>ಸನಲ್ ಕುಮಾರ್ ಶಶಿಧರನ್</p></div>

ಸನಲ್ ಕುಮಾರ್ ಶಶಿಧರನ್

   

ಕೊಚ್ಚಿ: ಖ್ಯಾತ ನಟಿಯೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಮಲಯಾಳಂ ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಶಿಧರನ್ ವಿರುದ್ಧ ಹಿಂಬಾಲಿಸುವಿಕೆ, ಕ್ರಿಮಿನಲ್ ಬೆದರಿಕೆ ಮತ್ತು ಮಾನಹಾನಿಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಏಳಮಕ್ಕರ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ನಟಿಯ ಹೆಸರಿನಲ್ಲಿ ಬೇರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಶಿಧರನ್ ಎಫ್‌ಐಆರ್‌ ಪ್ರತಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

2022ರ ಮೇ 5ರಂದು ಮಲಯಾಳ ನಟಿ ಮಂಜು ವಾರಿಯರ್‌ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಶಶಿಧರನ್‌ ಅವರನ್ನು ಪೊಲೀಸರು ಬಂಧಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಹಾಗೂ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಶಶಿಧರನ್‌ ವಿರುದ್ಧ ಮಂಜು ವಾರಿಯರ್‌ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.