ADVERTISEMENT

ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಎಸ್‌.ಪಿ. ವೆಂಕಟೇಶ್ ನಿಧನ

ಪಿಟಿಐ
Published 3 ಫೆಬ್ರುವರಿ 2026, 9:22 IST
Last Updated 3 ಫೆಬ್ರುವರಿ 2026, 9:22 IST
<div class="paragraphs"><p>ಎಸ್‌.ಪಿ. ವೆಂಕಟೇಶ್ </p></div>

ಎಸ್‌.ಪಿ. ವೆಂಕಟೇಶ್

   

ಚಿತ್ರ ಕೃಪೆ: ಎಕ್ಸ್‌ ಚಿತ್ರ

ಮಲಯಾಳಂನ 'ರಾಜವಿಂತೆ ಮಗನ್' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ಜನಪ್ರಿಯ ಸಂಗೀತ ನಿರ್ದೇಶಕ ಎಸ್‌. ಪಿ. ವೆಂಕಟೇಶ್‌ (70) ಮಂಗಳವಾರ ಹೃದಯಾಘಾತದಿಂದ ಚೆನ್ನೈನ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಚಲನಚಿತ್ರೋದ್ಯಮದ ಮೂಲಗಳು ತಿಳಿಸಿವೆ.

ADVERTISEMENT

ವೆಂಕಟೇಶ್‌ ಅವರು ಸಂಗೀತರಾಜನ್ ಎಂದೇ ಹೆಸರು ಪಡೆದಿದ್ದರು. ಮಲಯಾಳಂನ ಖ್ಯಾತ ನಟರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿಯಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದ್ದಾರೆ. ಮೆಲೋಡಿ ಗೀತೆಗಳಿಗೆ ಹೆಸರುವಾಸಿಯಾಗಿದ್ದರು.

1955ರ ಮಾರ್ಚ್‌ 5ರಂದು ವೆಂಕಟೇಶ್‌ ಜನಿಸಿದರು. ಆರಂಭದಲ್ಲಿ ಸಂಗೀತ ನಿರ್ದೇಶಕ ವಿಜಯ್ ಭಾಸ್ಕರ್ ಅವರೊಂದಿಗೆ ಚಲನಚಿತ್ರಗಳಲ್ಲಿ ಗಿಟಾರ್ ನುಡಿಸುತ್ತಿದ್ದರು.

ಬಳಿಕ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

1985ರಲ್ಲಿ 'ಜಾನಕೀಯ ಕೊಡತಿ' ಚಿತ್ರದ ಮೂಲಕ  ಸಂಗೀತ  ನಿರ್ದೇಶಕರಾಗಿ ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದರು. 1993ರಲ್ಲಿ 'ಪೈತೃಕಂ' ಮತ್ತು 'ಜನಮ್' ಚಿತ್ರಗಳಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶಕ’ ಎಂಬ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ಕನ್ನಡದ ಸಿನಿಮಾಗಳಾದ ‘ಮೇಘವರ್ಷಿಣಿ’, ‘ನಿಮ್ಮ ಪ್ರೀತಿಯ ಹುಡುಗ’ ಮತ್ತು ‘ಅರಗಿಣಿ‘ಯಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ವೆಂಕಟೇಶ್‌ ಅವರು 'ಭೂಮಿಯಲ್ಲಿ ರಾಜಕ್ಕನ್ಮಾರ್', 'ವಾಳಿಯೋರ ಕಜ್ಜಕಲ್', 'ಇಂದ್ರಜಾಲಂ', 'ನಾಡೋಡಿ', 'ಮಾಂತ್ರಿಕಂ', 'ಕಿಲುಕ್ಕಂ', 'ಮಿನ್ನಾರಂ', 'ಸ್ಫಡಿಕಂ', ಮತ್ತು 'ಜಾನಿ ವಾಕರ್' ಚಿತ್ರಗಳಲ್ಲಿ ಜನಪ್ರಿಯ ಹಾಡುಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.