ಚಿತ್ರ ಕೃಪೆ: Supriyanvi Picture
ಪ್ರಿಯಾ ಸುದೀಪ್ ಅವರ ‘ಸುಪ್ರಿಯಾನ್ವಿ ಪಿಕ್ಚರ್ಸ್‘ ಅಡಿಯಲ್ಲಿ ನಿರ್ಮಾಣವಾಗಿರುವ ‘ಮ್ಯಾಂಗೋ ಪಚ್ಚ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಕಿಚ್ಚನ ಅಕ್ಕನ ಮಗ ಸಂಚಿತ್ ಸಂಜೀವ್ ಅವರು ಮಾಸ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಇವರ ಮೊದಲ ಸಿನಿಮಾದ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ನಟ ಸುದೀಪ್ ಅವರು ‘ಮೈಸೂರು ಭಾಗದಲ್ಲಿ 2001–02ರಲ್ಲಿ ಸ್ಥಳೀಯ ಸಾಮ್ರಾಜ್ಯವೊಂದರಲ್ಲಿ ನಡೆದ ಪ್ರಾಮಾಣಿಕತೆ, ವಂಚನೆ ಮತ್ತು ಅಧಿಕಾರದ ಕಥಾವಸ್ತುವುಳ್ಳ ಚಿತ್ರವೇ ಮ್ಯಾಂಗೋ ಪಚ್ಚ ಎಂದಿದ್ದಾರೆ.
ಅಧಿಕಾರವಿರುವ ಜನರು ಯುದ್ಧಗಳನ್ನು ಗೆಲ್ಲುತ್ತಾರೆ ಇನ್ನು ಕೆಲವರು ಸಾಮ್ರಾಜ್ಯವನ್ನು ಸೃಷ್ಠಿಸುತ್ತಾರೆ. ಈ ಸಿನಿಮಾವು ಮರೆಯಲಾಗದ ಪಾತ್ರಗಳನ್ನು ನೀಡಿದೆ’ ಎಂದು ಕಿಚ್ಚ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ವಿವೇಕ್ ನಿರ್ದೇಶನ ಮಾಡಿದ್ದು, ಮಾಲಾಶ್ರೀ, ಮಯೂರ್ ಪಟೇಲ್, ಕಾಜಲ್ ಕುಂದರ್ ಅನೇಕರು ಬಣ್ಣ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.