ಚಿತ್ರ ಕೃಪೆ : varunkonidela7
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ತೆಲುಗು ಜನಪ್ರಿಯ ನಟ ವರಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ತಮ್ಮ ಚೊಚ್ಚಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 10ರಂದು ಖಾಸಗಿ ಆಸ್ಪತ್ರೆಯಲ್ಲಿ ಲಾವಣ್ಯ ತ್ರಿಪಾಠಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚಿತ್ರ ಕೃಪೆ : varunkonidela7
ಈ ಖುಷಿ ವಿಚಾರವನ್ನು ದಂಪತಿ ಮುದ್ದಾದ ಫೋಟೊದೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವರುಣ್ ತೇಜ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ. ವರುಣ್ ತೇಜ್ ದಂಪತಿಗೆ ಗಂಡು ಮಗು ಜನಿಸಿದ್ದರಿಂದ ಮೆಗಾ ಸ್ಟಾರ್ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ಚಿತ್ರ ಕೃಪೆ: chiranjeevikonidela
ಮೊಮ್ಮಗನನ್ನು ನೋಡಿದ ನಾಗಬಾಬು ದಂಪತಿ ಖುಷಿಯಾಗಿದ್ದಾರೆ. ಇನ್ನು, ಚಿರಂಜೀವಿ ಅವರು ಮೊಮ್ಮಗನನ್ನು ಎತ್ತುಕೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಚಿತ್ರ ಕೃಪೆ : varunkonidela7
ಲಾವಣ್ಯ ಮತ್ತು ವರುಣ್ ಇಬ್ಬರು ಒಟ್ಟಿಗೆ 2017ರಲ್ಲಿ ʻಮಿಸ್ಟರ್ʼ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ 2023ರಲ್ಲಿ ಇಟಲಿಯ ಟಸ್ಕನಿಯ ಬೋರ್ಗೊ ಸ್ಯಾನ್ ಫೆಲಿಸ್‌ನಲ್ಲಿ ತೆಲುಗು ಸಂಪ್ರದಾಯದಂತೆ ಮದುವೆಯಾಗಿದ್ದು, ಈ ಇಬ್ಬರ ಮದುವೆ ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರ್ಮಾ ತೇಜ್ ಸೇರಿದಂತೆ ಮೆಗಾ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಷ್ಟೇ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.