
ನಟಿ ಮೇಘನಾ ಗಾಂವ್ಕರ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಚಾರ್‌ಮಿನಾರ್, ಛೂ ಮಂಥರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಮೇಘನಾ ಗಾಂವ್ಕರ್ ಅವರು ಇದೀಗ ತಂದೆಯ ಬಹು ದಿನದ ಕನಸನ್ನು ನನಸು ಮಾಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ತಂದೆಯ ಕನಸು ನನಸಾಗಿದೆ ಎಂದು ಹೇಳಿದ್ದಾರೆ. ಅಭಿನಯದಲ್ಲಿ ಸಕ್ರಿಯವಾಗಿದ್ದರೂ ನಟಿ ಮೇಘನಾ ಗಾಂವ್ಕರ್ ತಮ್ಮ ಓದನ್ನು ಮುಂದುವರೆಸಿ, ಇಂಗ್ಲಿಷ್ ಸಾಹಿತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಪಿಎಚ್‌ಡಿ ಮಾಡಿದ್ದರು. ಇದೀಗ ಅಧಿಕೃತವಾಗಿ ಡಾಕ್ಟರೇಟ್ ಪದವಿ ಪಡೆದು ಸಂಭ್ರಮಿಸಿದ್ದಾರೆ.
ನಟಿ ಪೋಸ್ಟ್‌ನಲ್ಲಿ ಹೇಳಿದ್ದೇನು?
‘ಈ ದಿನ ನನ್ನ ತಂದೆಯ ಕನಸು ನನಸಾಗಿದೆ. ಅವರು ಯಾವಾಗಲೂ ನಾನು ಪಿಎಚ್‌ಡಿ ಮಾಡಬೇಕೆಂದು ಬಯಸುತ್ತಿದ್ದರು. ನಿನ್ನೆ, ನಾನು ಅಧಿಕೃತವಾಗಿ ನನ್ನ ಡಾಕ್ಟರೇಟ್ ಪಡೆದಿದ್ದೇನೆ. ನನ್ನ ಪೋಷಕರು ಅದನ್ನು ವೀಕ್ಷಿಸಲು ಬಂದಿದ್ದರು. ಇದು ತುಂಬಾ ವಿಶೇಷ ಕ್ಷಣ. ನಿಮ್ಮ ಪ್ರೋತ್ಸಾಹದಾಯಕ ಶುಭಾಶಯಗಳು ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಹಲವು ವರ್ಷಗಳ ಈ ಪ್ರಯಾಣವು ಕೊನೆಗೂ ಪೂರ್ಣಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.