ದೀಪಿಕಾ ಪಡುಕೋಣೆ
ಚಿತ್ರ: deepika padukone instagram
ಮೆಟಾ ಎಐ ತನ್ನ ಕೃತಕ ಬುದ್ಧಿಮತ್ತೆಯ ಸೌಲಭ್ಯವನ್ನು ಹಲವು ಸಾಧನಗಳಲ್ಲಿ ಪರಿಚಯಿಸಿದೆ. ಅದರಲ್ಲು ಮೆಟಾ ರೇ ಬಾನ್ ತಂಪು ಕನ್ನಡಕವೂ ಒಂದು. ಇದರಲ್ಲಿ ಜಾಗತಿಕ ಸೆಲೆಬ್ರಿಟಿಗಳ ಧ್ವನಿಯನ್ನು ಅಳವಡಿಸಲಾಗಿದ್ದು, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರ ಧ್ವನಿಯನ್ನೂ ಇಲ್ಲಿ ಆಲಿಸಬಹುದಾಗಿದೆ.
ರೇ- ಬಾನ್ ಮೆಟಾ ಗ್ಲಾಸ್ ಫೋನ್ ಬಳಕೆ ಮಾಡದೆ ನಿಮ್ಮ ಧ್ವನಿ ಬಳಕೆ ಮಾಡಿಕೊಂಡು ಮೆಟಾ ಎಐ ಜೊತೆಗೆ ಸಂವಹನ ನಡೆಸುವಂತೆ ವಿನ್ಯಾಸ ಮಾಡಲಾಗಿದೆ. ಬಳಕೆದಾರರು ಕೇವಲ ಹೇ ಮೆಟಾ ಎಂದು ಎಐ ಸಹಾಯದೊಂದಿಗೆ ಸಂಭಾಷಣೆ ಆರಂಭಿಸಿದರೆ ಸಾಕು. ಬಳಕೆದಾರರು ತಮ್ಮ ಪ್ರಶ್ನೆಗಳು, ಜೋಕ್ ಅಥವಾ ಭಾಷಾಂತರಗಳಿಗೂ ತಕ್ಷಣಕ್ಕೆ ಉತ್ತರ ಪಡೆಯಲು ಈ ಸ್ಮಾರ್ಟ್ಗ್ಲಾಸ್ ಸಹಾಯ ಪಡೆಯಬಹುದು.
ಸದ್ಯ, ಮೆಟಾ ಎಐ ಕೂಡ ದೀಪಿಕಾ ಪಡುಕೋಣೆ ಧ್ವನಿಯನ್ನು ಸೇರಿಸಿದೆ. ಇನ್ನುಮುಂದೆ ಮೆಟಾ ಜೊತೆಗೆ ದೀಪಿಕಾ ಪಡುಕೋಣೆ ಧ್ವನಿಯಲ್ಲಿ ಉತ್ತರ ಪಡೆಯಬಹುದು.
ಈ ಕುರಿತು ನಟಿ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೈಕ್ ಮುಂದೆ ನಿಂತಿರುವ ದೀಪಿಕಾ ಪಡುಕೋಣೆ, ‘ಹಾಯ್, ನಾನು ನಿಮ್ಮ ದೀಪಿಕಾ ಪಡುಕೋಣೆ. ಮೆಟಾ ಎಐನ ಹೊಸ ಧ್ವನಿ’ ಎಂದು ಹೇಳುವುದನ್ನು ಆ ವಿಡಿಯೋದಲ್ಲಿ ಕೇಳಬಹುದಾಗಿದೆ.
ಮುಂದುವರೆದು ‘ನಾನು ಈಗ ಮೆಟಾ ಎಐನ ಭಾಗವಾಗಿದ್ದೇನೆ. ಭಾರತ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲೂ ನೀವು ನನ್ನ ಧ್ವನಿಯೊಂದಿಗೆ ಇಂಗ್ಲಿಷ್‌ನಲ್ಲಿ ಚಾಟ್ ಮಾಡಬಹುದು. ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ನನಗೆ ತಿಳಿಸಿ’. ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.