
ನಟ ಮೋಹನ್ ಲಾಲ್ ಮತ್ತು ನಟಿ ಮೀರಾ ಜಾಸ್ಮಿನ್
ಪ್ರಜಾವಾಣಿ ಚಿತ್ರ
ಮಲಯಾಳಂನ ಸೂಪರ್‌ಸ್ಟಾರ್ ನಟ ಮೋಹನ್ ಲಾಲ್ ಅವರ ಮುಂದಿನ ಸಿನಿಮಾಗೆ ಬಹುಭಾಷಾ ನಟಿ ಮೀರಾ ಜಾಸ್ಮಿನ್ ಜೋಡಿಯಾಗಲಿದ್ದಾರೆ. ಸಿನಿಮಾಗೆ ತಾತ್ಕಾಲಿಕವಾಗಿ ‘L366’ ಎಂದು ಶೀರ್ಷಿಕೆ ನೀಡಲಾಗಿದೆ.
‘ಆಪರೇಷನ್ ಜಾವಾ’ ಹಾಗೂ ‘ಸೌದಿ ವೆಲ್ಲಕ್ಕ’ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ತರುಣ್ ಮೂರ್ತಿ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ರಸತಂತ್ರಂ’ ಸಿನಿಮಾದಲ್ಲಿ ಮೋಹನ್ ಲಾಲ್ ಹಾಗೂ ತರುಣ್ ಮೂರ್ತಿ ಒಟ್ಟಾಗಿ ಕೆಲಸ ಮಾಡಿದ್ದರು. ಇದೀಗ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ಈಗಾಗಲೇ ಜನವರಿ 23ರಿಂದಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸಿನಿಮಾ ಕಥೆ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಇತ್ತೀಚೆಗೆ ಜಾಸ್ಮಿನ್ ನಟನೆಯ ‘ಹೃದಯಪೂರ್ವಂ’ ಚಿತ್ರ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.