ADVERTISEMENT

ಅಮ್ಮನಾಗುವ ಖುಷಿಯಲ್ಲಿ ನಟಿ ಸೋನಮ್‌ ಕಪೂರ್‌: ಬೇಬಿ ಬಂಪ್ ಫೋಟೊ ವೈರಲ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 7:51 IST
Last Updated 13 ಏಪ್ರಿಲ್ 2022, 7:51 IST
ಸೋನಮ್‌ ಕಪೂರ್‌ ಮತ್ತು ಆನಂದ್‌ ಅಹುಜಾ
ಸೋನಮ್‌ ಕಪೂರ್‌ ಮತ್ತು ಆನಂದ್‌ ಅಹುಜಾ    

ಮುಂಬೈ: ಅಮ್ಮನಾಗುವ ಖುಷಿಯಲ್ಲಿರುವ ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ಬೇಬಿ ಬಂಪ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸೋನಮ್‌ ಹಾಗೂ ಆನಂದ್‌ ಅಹುಜಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ದಂಪತಿ 2018ರಲ್ಲಿ ವಿವಾಹವಾಗಿದ್ದರು.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಆನಂದ್‌, ನಿಮ್ಮನ್ನು ಎಡೆಬಿಡದೆ ಕಾಡುತ್ತೇನೆ. ಪ್ರತಿದಿನವೂ ಅಪೂರ್ವ’ ಎಂದು ಹೇಳಿಕೊಂಡಿದ್ದಾರೆ.

ಸೋನಮ್‌ –ಆನಂದ್‌ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿಮಾರ್ಚ್‌ನಲ್ಲಿ ತಿಳಿಸಿದ್ದರು. ಜತೆಗೆ ಇದೇ ವಿಚಾರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್‌ ಫೋಟೊವನ್ನು ಹಂಚಿಕೊಂಡಿದ್ದ ಸೋನಮ್‌, ಮಗು ಆಗಮನದ ನಿರೀಕ್ಷೆಯನ್ನು ತಡೆಯಲಾಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.

ಸೋನಮ್ ಪತಿ ಆನಂದ್‌ ಅಹುಜಾ ಅವರು ಉದ್ಯಮಿಯಾಗಿದ್ದಾರೆ. ಇವರು ರಫ್ತು–ಆಮದು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.

ಸೋನಮ್‌ ಅವರು ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. 2018ರಿಂದ ಇಲ್ಲಿಯವರೆಗೂ ಅವರು ಎರಡು ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ.

ಸದ್ಯ ಬೇಬಿ ಬಂಪ್‌ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ಸೋನಮ್‌ಗೆ ಶುಭಾಶಯಗಳನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.