ಎ.ಆರ್. ರೆಹಮಾನ್ ಹಾಗೂ ಸಾಯಿರಾ ಬಾನು
ಪಿಟಿಐ ಸಂಗ್ರಹ ಚಿತ್ರ
ಚೆನ್ನೈ: ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಅವರ ಪತ್ನಿ ಸಾಯಿರಾ ಬಾನು 29 ವರ್ಷಗಳ ವೈವಾಹಿಕ ಬದುಕಿಗೆ ವಿಚ್ಛೇದನದ ಮೂಲಕ ಮಂಗಳವಾರ ಅಂತ್ಯ ಹಾಡಿದ್ದಾರೆ.
‘ಸಂಬಂಧದಲ್ಲಿ ಭಾವುಕ ನೆಲೆಗಟ್ಟಿನಲ್ಲಿ ಒತ್ತಡ ಉಂಟಾಗಿದ್ದರಿಂದ ಇಬ್ಬರೂ ಪರಸ್ಪರ ಬೇರೆಯಾಗಲು ನಿರ್ಧರಿಸಿದರು’ ಎಂದು ವಕೀಲೆ ವಂದನಾ ಶಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
‘ಮೂವತ್ತು ವರ್ಷದ ದಾಂಪತ್ಯಕ್ಕೆ ಕಾಲಿಡುವ ಭರವಸೆ ಇಟ್ಟುಕೊಂಡಿದ್ದೆವು. ಆದರೆ, ಎಲ್ಲವೂ ನಾವು ಅಂದುಕೊಂಡಂತೆ ಅಂತ್ಯವಾಗದು. ಭಗವಂತನ ಸಿಂಹಾಸನ ಕೂಡ ಒಡೆದ ಹೃದಯಗಳಿಂದ ಅಲುಗಾಡುತ್ತದೆ’ ಎಂಬರ್ಥ ಕೊಡುವ ಪೋಸ್ಟ್ ಅನ್ನು ಎ.ಆರ್. ರೆಹಮಾನ್ ‘ಎಕ್ಸ್’ನಲ್ಲಿ ಹಾಕಿದ್ದಾರೆ.
ರೆಹಮಾನ್ ಹಾಗೂ ಸಾಯಿರಾ ಬಾನು ಇಬ್ಬರೂ ವಿಚ್ಛೇದನ ಪಡೆದ ಸಂಗತಿಯನ್ನು ಜಂಟಿ ಪತ್ರಿಕಾ ಹೇಳಿಕೆಯಿಂದ ಕೂಡ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.