ADVERTISEMENT

ಮಲೆನಾಡಿನಿಂದ ಮಧ್ಯ ಪ್ರದೇಶದತ್ತ ‘ಮೈ ಹೀರೋ’

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 7:02 IST
Last Updated 20 ಮಾರ್ಚ್ 2023, 7:02 IST
ಜಿಲಾಲಿ ರೆಜ್ ಕಲ್ಲಾಹ್
ಜಿಲಾಲಿ ರೆಜ್ ಕಲ್ಲಾಹ್   

ಅಮೆರಿಕದಿಂದ ಬಂದ ಅಧಿಕಾರಿಗೆ ಭಾರತದ ಪುಟ್ಟ ಹುಡುಗನೊಬ್ಬ ಗೆಳೆಯನಾದಾಗ ಹೊರಬಂದ ಕತೆಗಳು ಏನೇನಿರಬಹುದು? ಇದಕ್ಕೆಲ್ಲಾ ಉತ್ತರಿಸಿದೆ ‘ಮೈ ಹೀರೋ’.

ವಿಶ್ವದಾದ್ಯಂತ ಇರುವ ಸಾಮಾಜಿಕ ಸಮಸ್ಯೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರ ಮೂಡಿಬರುತ್ತಿದೆ. ಅವಿನಾಶ್‌ ವಿಜಯ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ಅವರ ನಿರ್ದೇಶನದ ಮೊದಲ ಚಿತ್ರವಿದು. ‘ಮೈ ಹೀರೋ’ ಮೊದಲ ಹಂತದ ಚಿತ್ರೀಕರಣವನ್ನು ಚಿಕ್ಕಮಗಳೂರು ಭಾಗದಲ್ಲಿ ಮುಗಿಸಿಕೊಂಡಿದ್ದಾನೆ. ನಿರ್ದೇಶಕರ ಸಾರಥ್ಯದ ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್, ಬಾಲನಟ ವೇದಿಕ್ ಕೌಶಿಕ್, ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ,

ತನುಜಾ ಕೃಷ್ಣಪ್ಪ, ನವೀನ್ ಬೊಂದೇಲ್ ತಾರಾಗಣದಲ್ಲಿದ್ದಾರೆ. ಮಾರ್ಚ್‌ ಅಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

ADVERTISEMENT

ಗಗನ್ ಬಡೇರಿಯಾ ಅವರ ಸಂಗೀತ ನಿರ್ದೇಶನವಿದೆ ಹಾಗೂ ವೀನಸ್ ನಾಗರಾಜ ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಎ.ವಿ.ಸ್ಟುಡಿಯೋಸ್ ತಂಡದವರು ಮತ್ತು ಜಿಮ್ ಶಿವು ಸಂಭಾಷಣೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.