ADVERTISEMENT

‘ನಾಟು ನಾಟು’ ಹಾಡಿಗೆ ಆಸ್ಕರ್: ರಾಮ್ ಚರಣ್‌ಗೆ ಅದ್ದೂರಿ ಸ್ವಾಗತ, ಇಂದು ಮೋದಿ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2023, 7:12 IST
Last Updated 17 ಮಾರ್ಚ್ 2023, 7:12 IST
ರಾಮ್ ಚರಣ್
ರಾಮ್ ಚರಣ್   

ನವದೆಹಲಿ: ‘ನಾಟು ನಾಟು’ ಕೇವಲ ನಮ್ಮ ಹಾಡಾಗಿಲ್ಲ, ಪ್ರತಿಯೊಬ್ಬ ಭಾರತೀಯನ ಹಾಡಾಗಿದೆ. ‘ಆರ್‌ಆರ್‌ಆರ್‌’ ಸಿನಿಮಾವನ್ನು ವೀಕ್ಷಿಸಿದ್ದಕ್ಕಾಗಿ ಮತ್ತು ‘ನಾಟು ನಾಟು’ ಹಾಡನ್ನು ಸೂಪರ್‌ಹಿಟ್ ಮಾಡಿದ ಸಿನಿಪ್ರಿಯರಿಗೆ ಧನ್ಯವಾದಗಳು ಎಂದು ನಟ ರಾಮ್ ಚರಣ್ ಹೇಳಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಟು ನಾಟು’ ಹಾಡನ್ನು ಕೇಳುವ ಮೂಲಕ ಚಿತ್ರತಂಡವನ್ನು ಬೆಂಬಲಿಸಿದ ಭಾರತದ ಎಲ್ಲಾ ಅಭಿಮಾನಿಗಳು ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ನನಗೆ ತುಂಬಾ ಸಂತೋಷವಾಗಿದೆ. ಎಲ್ಲರಿಗೂ ಧನ್ಯವಾದಗಳು. ಎಂ.ಎಂ ಕೀರವಾಣಿ, ಎಸ್.ಎಸ್.ರಾಜಮೌಳಿ ಮತ್ತು ಚಂದ್ರಬೋಸ್ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಶ್ರಮದಿಂದಾಗಿ ನಾವು ರೆಡ್ ಕಾರ್ಪೆಟ್‌ಗೆ ಹೋಗಿ ಭಾರತಕ್ಕೆ ಆಸ್ಕರ್ ತಂದಿದ್ದೇವೆ’ ಚರಣ್ ಹೇಳಿಕೊಂಡಿದ್ದಾರೆ.

ADVERTISEMENT

ರಾಮ್‌ ಚರಣ್, ಉಪಸನಾ ಕೊನಿಡೆಲಾ ದಂಪತಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

95ನೇ ಆಸ್ಕರ್‌ನಲ್ಲಿ ‘ನಾಟು ನಾಟು‘ ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ಸಿಕ್ಕಿದೆ. ಆರ್‌.ಆರ್‌.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್‌ ಪ್ರಶಸ್ತಿ ಲಭಿಸುತ್ತಿದಂತೆ ಚಿತ್ರತಂಡ ಸಂಭ್ರಮಿಸಿದೆ.

‘ಲೇಡಿ ಗಾಗಾ’, ‘ಡಯೇನ್ ವಾರೆನ್’ ಮತ್ತು ‘ರಿಹಾನ್ನಾ’, ಟೆಲ್ ಇಟ್ ಲೈಕ್ ಎ ವುಮನ್ ಚಿತ್ರದ 'ಚಪ್ಪಾಳೆ', 'ಟಾಪ್ ಗನ್: ಮೇವರಿಕ್' ಚಿತ್ರದಿಂದ 'ಹೋಲ್ಡ್ ಮೈ ಹ್ಯಾಂಡ್', 'ಬ್ಲ್ಯಾಕ್ ಪ್ಯಾಂಥರ್: ವಕಾಂಡ ಫಾರೆವರ್' ನಿಂದ 'ಲಿಫ್ಟ್ ಮಿ ಅಪ್', 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ಸಿನಿಮಾದಿಂದ 'ದಿಸ್ ಈಸ್ ಎ ಲೈಫ್' ಹಾಡುಗಳ ವಿರುದ್ಧ ಸ್ಪರ್ಧಿಸಿ, ನಾಟು ನಾಟು ಹಾಡು ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.

'ನಾಟು ನಾಟು' ಈ ವರ್ಷ ಗೋಲ್ಡನ್ ಗ್ಲೋಬ್ ಮತ್ತು ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯನ್ನೂ ಗೆದ್ದಿದೆ. ಆರ್‌.ಆರ್‌.ಆರ್ ಚಿತ್ರದಲ್ಲಿ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಮತ್ತು ಶ್ರೇಯಾ ಸರನ್ ನಟಿಸಿದ್ದಾರೆ. ಚಿತ್ರದಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ, ಬ್ರಿಟಿಷರ ವಿರುದ್ಧದ ಹೋರಾಟದ ಕಾಲ್ಪನಿಕ ಕಥೆ ಹಂದರ ಹೊಂದಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.