ADVERTISEMENT

‘2+’ ಚಿತ್ರದ ‘ನನಗೂ ನಿನಗೂ’ ಹಾಡು ಬಿಡುಗಡೆ

ಪ್ರಜಾವಾಣಿ ವಿಶೇಷ
Published 19 ಡಿಸೆಂಬರ್ 2025, 22:52 IST
Last Updated 19 ಡಿಸೆಂಬರ್ 2025, 22:52 IST
ಗಣ್ಯರೊಂದಿಗೆ ಚಿತ್ರತಂಡ
ಗಣ್ಯರೊಂದಿಗೆ ಚಿತ್ರತಂಡ   

ಬಹುತೇಕ ಹೊಸಬರಿಂದಲೇ ಕೂಡಿರುವ ‘2+’ ಚಿತ್ರದ ‘ನನಗೂ ನಿನಗೂ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಅಶೋಕ್ ರಾಯ್ ನಿರ್ದೇಶನವಿದೆ.

ಹಾಡಿಗೆ ಅಭಿಮನ್ ರಾಯ್ ಸಂಗೀತ ನಿರ್ದೇಶನವಿದ್ದು, 34 ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಹಲವು ಪ್ರಸಿದ್ಧ ಗಾಯಕರು ದನಿಯಾಗಿದ್ದಾರೆ. ಚಿತ್ರಕ್ಕೆ ಅಭಿಮನ್ ರಾಯ್ ಅವರೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದಿದ್ದಾರೆ.

‘ನಾನು ಈ ಸಾಹಸಕ್ಕೆ ಕೈಹಾಕಲು ಲಹರಿ ವೇಲು ಸ್ಫೂರ್ತಿ. ಆರಂಭದಲ್ಲಿ ಈ ಹಾಡನ್ನು ನಾಲ್ಕು ಭಾಷೆಗಳಲ್ಲಿ ಮಾತ್ರವೇ ಮಾಡಿದ್ದೆವು. ಹಾಡು ಕೇಳಿದ ವೇಲು ಅವರು ಬೇರೆ ಬೇರೆ ಭಾಷೆಗಳಲ್ಲಿ ಮಾಡುವಂತೆ ಹೇಳಿದರು. ಕನ್ನಡದಲ್ಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉತ್ತರ ಕರ್ನಾಟಕ, ಕೊಡವ, ಬ್ಯಾರಿ, ಕುಂದಾಪುರ, ಮಂಡ್ಯ, ಕೊಂಕಣಿ, ತುಳು ಸೇರಿದಂತೆ ಎಂಟು ಶೈಲಿಯಿದೆ. ಉಳಿದಂತೆ ತಮಿಳು, ತೆಲುಗು, ಮಲಯಾಳ ಸೇರಿದಂತೆ ವಿದೇಶಿ ಭಾಷೆಗಳಲ್ಲಿ ಹಾಡು ಬಿಡುಗಡೆಗೊಂಡಿದೆ’ ಎಂದರು ಅಭಿಮನ್.

ADVERTISEMENT

‘ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಶೇಕಡ 60ರಷ್ಟು ಚಿತ್ರೀಕರಣ ಮುಗಿದಿದೆ. ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಯೋಜನೆಯಿದೆ. ಒಂದೇ ಸಿನಿಮಾದಲ್ಲಿ ಎರಡು ಕಥೆ ಇದ್ದು, ಮಧ್ಯಂತರ ವಿರಾಮಕ್ಕೂ ಮೊದಲು ಒಂದು ಕಥೆ, ಆನಂತರ ಮತ್ತೊಂದು ಕಥೆ ‌ನಡೆಯುತ್ತದೆ. ಹೀಗಾಗಿ ‘2+’ ಎಂಬ ಶೀರ್ಷಿಕೆ ಇಟ್ಟಿದ್ದೇವೆ’ ಎಂದರು ನಿರ್ದೇಶಕ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.