ADVERTISEMENT

ಜ.21ಕ್ಕೆ ಒಟಿಟಿಯಲ್ಲಿ ನಾನಿ –ಸಾಯಿ ಪಲ್ಲವಿ ಅಭಿನಯದ ‘ಶ್ಯಾಮ್ ಸಿಂಗಾ ರಾಯ್’

ಐಎಎನ್ಎಸ್
Published 9 ಜನವರಿ 2022, 12:14 IST
Last Updated 9 ಜನವರಿ 2022, 12:14 IST
'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಾನಿ ಮತ್ತು ಸಾಯಿ ಪಲ್ಲವಿ –ಐಎಎನ್‌ಎಸ್ ಚಿತ್ರ
'ಶ್ಯಾಮ್ ಸಿಂಗಾ ರಾಯ್' ಚಿತ್ರದಲ್ಲಿ ನಾನಿ ಮತ್ತು ಸಾಯಿ ಪಲ್ಲವಿ –ಐಎಎನ್‌ಎಸ್ ಚಿತ್ರ   

ಹೈದರಾಬಾದ್: ನಟ ನಾನಿ -ಸಾಯಿ ಪಲ್ಲವಿ ಅಭಿನಯದ ತೆಲುಗಿನ 'ಶ್ಯಾಮ್ ಸಿಂಗಾ ರಾಯ್' ಚಿತ್ರವು ಜನವರಿ 21ರಿಂದ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಡಿ.24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೂಪರ್ ನ್ಯಾಚುರಲ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಾನಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡರೆ, ಇತ್ತ ಸಾಯಿ ಪಲ್ಲವಿ ದೇವದಾಸಿ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ADVERTISEMENT

ಚಿತ್ರಕ್ಕೆ ಮಿಕ್ಕಿ.ಜೆ.ಮೇಯರ್ ಅವರ ಸಂಗೀತವಿದ್ದು, ಕೃತಿ ಶೆಟ್ಟಿ, ಮಡೋನಾ ಸೆಬಾಸ್ಟಿಯನ್ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ಸಂಕ್ರಾಂತಿ ಹಬ್ಬದ ಬಳಿಕ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ನಟ ನಾಗಾರ್ಜುನ ಮತ್ತು ನಾಗ ಚೈತನ್ಯ ಅಭಿನಯದ ‘ಬಂಗಾರ್ರಾಜು’ ಸಿನಿಮಾ ಜ.14ರಂದು ಬಿಡುಗಡೆಯಾಗಲಿದೆ, ಇದು 'ಶ್ಯಾಮ್ ಸಿಂಗಾ ರಾಯ್' ಚಿತ್ರದ ಮೇಲೆ ಪರಿಣಾಮ ಬೀರಲಿದೆ ಎಂಬುದು ಸಿನಿಮಾ ವಿಶ್ಲೇಷಕರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.