ADVERTISEMENT

ಆ.21ಕ್ಕೆ ‘ನಾನಿ’ ಅಭಿನಯದ ‘ದಿ ಪ್ಯಾರಡೈಸ್‌’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 23:30 IST
Last Updated 16 ಫೆಬ್ರುವರಿ 2026, 23:30 IST
ನಾನಿ 
ನಾನಿ    

ತೆಲುಗು ನಟ ನಾನಿ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ದಿ ಪ್ಯಾರಡೈಸ್‌’ನ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 

ಸಿನಿಮಾ ಆ.21ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಸದ್ಯ ಸಿನಿಮಾದ ಶೂಟಿಂಗ್‌ ಭರದಿಂದ ಸಾಗಿದ್ದು, ನಾನಿಯ ಇಂಟ್ರೊಡಕ್ಷನ್‌ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್‌ ರವಿಚಂದರ್‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ನಾನಿ ನೂರಾರು ಡಾನ್ಸರ್ಸ್‌ ಜೊತೆ ಬೃಹತ್‌ ಸೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಸುಧನ್‌ ಮಾಸ್ಟರ್‌ ನೃತ್ಯ ನಿರ್ದೇಶನದಲ್ಲಿ ಹಾಡು ಚಿತ್ರೀಕರಣಗೊಳ್ಳುತ್ತಿದೆ. 

ಈ ಹಿಂದೆ ನಾನಿ ನಟಿಸಿದ್ದ ‘ದಸರಾ’ ಸಿನಿಮಾ ನಿರ್ದೇಶಿಸಿದ್ದ ಶ್ರೀಕಾಂತ್‌ ಒಡೆಲಾ ‘ದಿ ಪ್ಯಾರಡೈಸ್‌’ಗೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಿನಿಮಾದಲ್ಲಿ ಮೋಹನ್ ಬಾಬು, ರಾಘವ್ ಜುಯಾಲ್ ಮತ್ತು ಸಂಪೂರ್ಣೇಶ್ ಬಾಬು ಸೇರಿದಂತೆ ದೊಡ್ಡ ತಾರಾಬಳಗವಿದೆ. ‘ದಸರಾ’ ಸಿನಿಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಅವರೇ ಈ ಸಿನಿಮಾಗೂ ಬಂಡವಾಳ ಹೂಡಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್‌’ ಬ್ಯಾನರ್‌ನಡಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. 

ADVERTISEMENT

ಜಿ.ಕೆ.ವಿಷ್ಣು ಛಾಯಾಚಿತ್ರಗ್ರಹಣ, ನವೀನ್ ನೂಲಿ ಸಂಕಲನ ‘ದಿ ಪ್ಯಾರಡೈಸ್’ ಸಿನಿಮಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.