ADVERTISEMENT

ಮುಂಬೈ: ಕಾರು ಅಪಘಾತದಲ್ಲಿ ನಟಿ ನೋರಾ ಫತೇಹಿಗೆ ಗಾಯ

ಪಿಟಿಐ
Published 21 ಡಿಸೆಂಬರ್ 2025, 3:49 IST
Last Updated 21 ಡಿಸೆಂಬರ್ 2025, 3:49 IST
<div class="paragraphs"><p>ನೋರಾ ಫತೇಹಿ</p></div>

ನೋರಾ ಫತೇಹಿ

   

ಮುಂಬೈ: ಇಲ್ಲಿನ ಪಶ್ಚಿಮ ಉಪನಗರದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಅವರ ವಾಹನಕ್ಕೆ ಕಾರು ಡಿಕ್ಕಿ ಹೊಡೆಡಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಉಪನಗರ ಅಂಬೋಲಿಯ ಲಿಂಕ್ ರಸ್ತೆಯಲ್ಲಿ ನೋರಾ ಪ್ರಯಾಣಿಸುತ್ತಿದ್ದಾಗ ಅಪಾಘತ ಸಂಭವಿಸಿದೆ. ಪ್ರಕರಣ ಸಂಬಂಧ ವಿನಯ್ ಸಕ್ಪಾಲ್ (27) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಅಪಘಾತದ ಸಮಯದಲ್ಲಿ ಬಂಧಿತ ಪಾನಮತ್ತನಾಗಿದ್ದ ಎಂಬ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.

ಫತೇಹಿ ಅವರು ಸನ್‌ಬರ್ನ್ ಸಂಗೀತ ಉತ್ಸವಕ್ಕೆ ತೆರಳುತ್ತಿದ್ದರು. ವೈದ್ಯಕೀಯ ತಪಾಸಣೆಯ ನಂತರ ಉತ್ಸವದಲ್ಲಿ ಭಾಗವಹಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.