ADVERTISEMENT

ಗಾಯಕ ಸ್ಟೆಬಿನ್ ಬೆನ್ ಜತೆ ನಟಿ ಕೃತಿ ಸನೋನ್ ಸಹೋದರಿ ನೂಪುರ್ ನಿಶ್ಚಿತಾರ್ಥ

PTI
Published 3 ಜನವರಿ 2026, 12:20 IST
Last Updated 3 ಜನವರಿ 2026, 12:20 IST
<div class="paragraphs"><p>ನೂಪುರ್&nbsp;ಸನೋನ್ ಹಾಗೂ&nbsp;ಸ್ಟೆಬಿನ್ ಬೆನ್ </p></div>

ನೂಪುರ್ ಸನೋನ್ ಹಾಗೂ ಸ್ಟೆಬಿನ್ ಬೆನ್

   

ಚಿತ್ರ: ಇನ್‌ಸ್ಟಾಗ್ರಾಂ

ಬಾಲಿವುಡ್‌ ನಟಿ ಕೃತಿ ಸನೋನ್ ಸಹೋದರಿ ನೂಪುರ್ ಸನೋನ್ ಅವರು ‘ಸಾಹಿಬಾ’ ಖ್ಯಾತಿಯ ಸ್ಟೆಬಿನ್ ಬೆನ್ ಅವರೊಂದಿಗೆ ಇಂದು (ಶನಿವಾರ) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೇ ಫೋಟೊಗಳನ್ನು ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ನಟಿ ಕೃತಿ ಸನೋನ್ ಅವರ ಸಹೋದರಿ ಸನೋನ್ ಅವರು ಮದುವೆಯ ಪ್ರಸ್ತಾಪದ ಸರಣಿ ಚಿತ್ರಗಳನ್ನು ಹಂಚಿಕೊಂಡು ‘ಯೆಸ್’ ಎಂದು ಹೇಳಿಬಿಟ್ಟೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಇದೇ ಫೋಟೊಗಳು ಸಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಇನ್ನು, ಜನಪ್ರಿಯ ಹಿನ್ನೆಲೆ ಗಾಯಕ ಸ್ಟೆಬಿನ್ ಬೆನ್ ಮೊಣಕಾಲಿನ ಮೇಲೆ ನಿಂತು ಮದುವೆ ಪ್ರಸ್ತಾಪ ಮಾಡಿದ್ದಾರೆ. ಹಿಂಭಾಗದಲ್ಲಿ ಕೆಲವರು ‘ವಿಲ್ ಯು ಮ್ಯಾರಿ ಮಿ’ ಎಂಬ ಬೋರ್ಡ್ ಅನ್ನು ಹಿಡಿದಿದುಕೊಂಡಿದ್ದು ಕಾಣಿಸಿದೆ. ಆಗ ನೂಪುರ್ ಸನೋನ್ ‘ಯೆಸ್’ ಎಂದು ಉತ್ತರಿಸಿದ ಕೂಡಲೇ ನಟಿಗೆ ಉಂಗುರವನ್ನು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.