ADVERTISEMENT

1961 ಹಾಲಿವುಡ್‌ನ ಕಪ್ಪು– ಬಿಳುಪು ಸಿನಿಮಾ ಯುಗದ ಕೊನೆಯ ಹಂತ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 19:45 IST
Last Updated 5 ಜನವರಿ 2019, 19:45 IST
ಒಂಚೂರು
ಒಂಚೂರು   

1961 ಹಾಲಿವುಡ್‌ನ ಕಪ್ಪು– ಬಿಳುಪು ಸಿನಿಮಾ ಯುಗದ ಕೊನೆಯ ಹಂತ. ಆ ವರ್ಷ ಹಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಬಹುತೇಕ ಕಪ್ಪು ಬಿಳುಪು ಸಿನಿಮಾಗಳು.

ಭಾರತದಲ್ಲಿಯೂ ಸರಿಸುಮಾರು ಆ ಸಮಯದಲ್ಲಿಯೇ ಸಿನಿಮಾ ಮಾಧ್ಯಮ ಕಪ್ಪು ಬಿಳುಪಿನಿಂದ ವರ್ಣಮಯ ದಾರಿಗೆ ಹೊರಳಿಕೊಂಡಿದ್ದು.ಇದು ತಂತ್ರಜ್ಞಾನದ ಬದಲಾವಣೆಯಾದರೂ ಅದರ ಪರಿಣಾಮಗಳೆಲ್ಲವೂ ಸಕಾರಾತ್ಮಕವಾಗಿಯೇ ಏನೂ ಇರಲಿಲ್ಲ. ಹಲವು ನಟರು, ತಂತ್ರಜ್ಞರು ಈ ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದೆ ತೆರೆಮರೆಗೆ ಸರಿದಿದ್ದುಂಟು.

ಈಗ ತಂತ್ರಜ್ಞಾನ ಹಲವು ದೆಸೆಗಳಿಂದ ಮುಂದುವರಿದಿದೆ. ಆದರೆ ಇಂದಿಗೂ ಹಲವು ನಿರ್ದೇಶಕರಿಗೆ ಕಪ್ಪು–ಬಿಳುಪಿನ ವ್ಯಾಮೋಹ ಮುಗಿದಿಲ್ಲ. ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ ‘ದಿ ಆರ್ಟಿಸ್ಟ್‌’ ಇದಕ್ಕೊಂದು ಉದಾಹರಣೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.