ADVERTISEMENT

ಕಾಂತಾರದಲ್ಲಿ ಮೋಡಿ ಮಾಡಿದ ‘ಪಾರು’ ಖ್ಯಾತಿಯ ಪ್ರಾನ್ವಿ: ಹೇಗಿದೆ ಜನರ ರಿಯಾಕ್ಷನ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 11:19 IST
Last Updated 3 ಅಕ್ಟೋಬರ್ 2025, 11:19 IST
<div class="paragraphs"><p><strong>ಬಾಲನಟಿ&nbsp;ಪ್ರಾನ್ವಿ ಅಕ್ಷಯ್</strong></p></div>

ಬಾಲನಟಿ ಪ್ರಾನ್ವಿ ಅಕ್ಷಯ್

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಹುನಿರೀಕ್ಷಿತ ಕಾಂತಾರ ಅಧ್ಯಾಯ 1 ನಿನ್ನೆ (ಗುರುವಾರ) ವಿಶ್ವಾದ್ಯಂತ ಬಿಡುಗಡೆಯಾಗಿದೆ. ಕಾಂತಾರ ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೊತೆಗೆ ಸಿನಿಮಾ ತಂಡದ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ವಿಶೇಷವಾಗಿ ಈ ಸಿನಿಮಾದಲ್ಲಿ ನೂರಾರು ಕಲಾವಿದರು ಆಯಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ADVERTISEMENT

ಸ್ಟಾರ್‌ಗಳೊಂದಿಗೆ ಬಾಲನಟಿ ಪ್ರಾನ್ವಿ ಅಕ್ಷಯ್

ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ಪುಟಾಣಿ ಪ್ರಾನ್ವಿ ಕಾಂತಾರ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾಳೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಪಾರು’ ಧಾರಾವಾಹಿಯಲ್ಲಿ ‘ಪುಟಾಣಿ’ ಪಾತ್ರದಲ್ಲಿ ಪ್ರಾನ್ವಿ ಅಕ್ಷಯ್ ನಟಿಸಿದ್ದಳು. ಪ್ರಾನ್ವಿಯ ಮುದ್ದಾದ ನಟನೆಗೆ ವೀಕ್ಷಕರು ಕೂಡ ಫಿದಾ ಆಗಿದ್ದರು.

ಸ್ಟಾರ್‌ಗಳೊಂದಿಗೆ ಬಾಲನಟಿ ಪ್ರಾನ್ವಿ ಅಕ್ಷಯ್

ಇದೀಗ ಬಾಲನಟಿ ಪ್ರಾನ್ವಿ ಅಕ್ಷಯ್ ಕಾಂತಾರ ಅಧ್ಯಾಯ 1ರಲ್ಲಿ ನಟಿಸಿದ್ದಾಳೆ. ಈ ಸಿನಿಮಾದಲ್ಲಿ ಅಭಿನಯಿಸಿದ ಬಗ್ಗೆ ಪ್ರಾನ್ವಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ.

ಕಾಂತಾರದಲ್ಲಿ ಅಭಿನಯಿಸಿದ ಫೋಟೊಗಳ ಜೊತೆಗೆ ‘ನಂಬಲಾಗದ ಭಾವನೆ. ಕನಸು ನನಸಾಯಿತು. ದೊಡ್ಡ ಪರದೆ. ಇನ್ನೂ ಹಲವು ಬರಲಿವೆ’ ಎಂದು ಬರೆದುಕೊಂಡಿದ್ದಾಳೆ. ಇನ್ನು, ಕಾಂತಾರದಲ್ಲಿ ಪರದೆ ಹಂಚಿಕೊಂಡ ಪುಟಾಣಿ ಪ್ರಾನ್ವಿ ನಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮಂದಿ ಹಾಡಿ ಹೊಗಳಿದ್ದಾರೆ.

ದೊಡ್ಡ ಪರದೆಯ ಮೇಲೆ ನೋಡಿ ಖುಷಿ ಆಯ್ತು, ಅಭಿನಂದನೆಗಳು ಪುಟ್ಟ, ಅಪ್ಪನ ಮುದ್ದಿನ ಮಗಳೇ ಮತ್ತಷ್ಟು ಯಶಸ್ಸು ನಿನ್ನದಾಗಲಿ ಕಂದ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರಸ್ತುತವಾಗಿ ಪ್ರಾನ್ವಿ ಅಕ್ಷಯ್ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.