ADVERTISEMENT

₹1,000 ಕೋಟಿ ಗಳಿಕೆ ಕಂಡ ‘ಪಠಾಣ್’: ಇತಿಹಾಸ ಸೃಷ್ಟಿ ಎಂದ ಯಶ್‌ರಾಜ್ ಫಿಲ್ಮ್ಸ್

ಪಿಟಿಐ
Published 21 ಫೆಬ್ರುವರಿ 2023, 11:22 IST
Last Updated 21 ಫೆಬ್ರುವರಿ 2023, 11:22 IST
   

ಮುಂಬೈ: ‘ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ವಿಶ್ವದಾದ್ಯಂತ ₹1,000 ಕೋಟಿ ಗಳಿಸಿದ್ದು, ಈ ಸಾಧನೆ ಮಾಡಿದ ಮೊದಲ ಹಿಂದಿ ಆವೃತ್ತಿಯ ಸಿನಿಮಾ ಎಂಬ ಖ್ಯಾತಿಗ ಪಾತ್ರವಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ’‌ ಎಂದು ಚಿತ್ರ ನಿರ್ಮಾಣ ಸಂಸ್ಥೆ ಯಶ್‌ರಾಜ್ ಫಿಲ್ಮ್ಸ್ ಹೇಳಿದೆ.

‘ವಿಶ್ವದಾದ್ಯಂತ ಈವರೆಗಿನ ಚಿತ್ರದ ಒಟ್ಟು ಗಳಿಕೆಯೂ ₹1,000 ಕೋಟಿಯಾಗಿದೆ(ಭಾರತದಲ್ಲಿ ₹623 ಕೋಟಿ ಮತ್ತು ವಿದೇಶದಲ್ಲಿ ₹377 ಕೋಟಿ)’ಎಂದು ವೈಆರ್‌ಎಫ್‌ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

ಮೊದಲ ಬಾರಿ ಬಿಡುಗಡೆಯಲ್ಲೇ ಸಾವಿರ ಕೋಟಿ ಗಳಿಕೆ ಕಂಡ ಮೊದಲ ಹಿಂದಿ ಆವೃತ್ತಿಯ ಸಿನಿಮಾ ಪಠಾಣ್ ಎಂದು ಯಶ್ ರಾಜ್ ಫಿಲ್ಮ್ಸ್ ಹೇಳಿದೆ.

ಅಮೀರ್ ಖಾನ್ ಅಭಿನಯದ ‘ದಂಗಲ್’ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎಂಬ ಖ್ಯಾತಿ ಉಳಿಸಿಕೊಂಡಿದ್ದು, ಈ ಚಿತ್ರ ಒಟ್ಟು ₹2,000 ಕೋಟಿ ಗಳಿಸಿತ್ತು.

ಕೆಜಿಎಫ್‌: ಚಾಪ್ಟರ್ 2, ಬಾಹುಬಲಿ–2, ಆರ್‌ಆರ್‌ಆರ್‌ ಚಿತ್ರಗಳು ಸಾವಿರ ಕೋಟಿಗೂ ಹೆಚ್ಚು ಗಳಿಕೆ ಕಂಡ ಇತರೆ ಭಾರತೀಯ ಚಿತ್ರಗಳಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.