ADVERTISEMENT

PHOTOS: 2024ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕಾಂತಾರ, ಪುಷ್ಪ–2!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2024, 13:24 IST
Last Updated 4 ಜನವರಿ 2024, 13:24 IST
   
<div class="paragraphs"><p>ಇನ್‌ಸ್ಟಾಗ್ರಾಮ್‌</p></div>

ತೆಲುಗಿನ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ' ಚಿತ್ರದ ಭಾಗ 2 ‘ಪುಷ್ಪ–ದಿ ರೂಲ್’ 2024ರ ಆಗಸ್ಟ್15ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ.

ನಟ ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ– 1 ಸಿನಿಮಾ 2024ರ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಯೋಚಿಸಿದೆ.

ದಳಪತಿ ವಿಜಯ್‌ ಅಭಿಯನದ G.O.A.T ಚಿತ್ರವು ಈ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

ADVERTISEMENT

ಸಿಂಗಂ ಸರಣಿಯ 3ನೇ ಸಿನಿಮಾ ‘ಸಿಂಗಂ ಎಗೇನ್‌’ ಚಿತ್ರದಲ್ಲಿ ನಟ ಅಜಯ್ ದೇವಗನ್ ನಟಿಸಲಿದ್ದು, 2024ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧತೆ ನಡೆದಿದೆ.

ರಜನಿಕಾಂತ್ ಅಭಿಯನದ Vettaiyan ಸಿನಿಮಾ ಈ ವರ್ಷ ತೆರೆಗೆ ಅಪ್ಪಳಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ತಮಿಳು ನಟ ಅಜಿತ್‌ ಕುಮಾರ್‌ ಅಭಿನಯದ  ‘Vidaamuyarchi‘ ಚಿತ್ರ ಇದೇ ವರ್ಷ ತೆರೆಗೆ ಬರಲಿದೆ 

ಅಕ್ಷಯ್‌ಕುಮಾರ್‌ ಹಾಗೂ  ಟೈಗರ್‌ ಶ್ರಾಫ್ ಅಭಿನಯದ ‘Bade Miyan Chote Miyan‘ ಚಿತ್ರ ಈ ವರ್ಷದ ಈದ್‌ ಹಬ್ಬಕ್ಕೆ ಬರಲು ಸಜ್ಜಾಗಿದೆ.

ಮೋಹನ್‌ ಲಾಲ್‌ ನಟನೆಯ ಮಲೈಕೋಟ್ಟೈ ವಾಲಿಬಾನ್‌ ಚಿತ್ರವು  ಇದೇ ಜನವರಿ 25ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ.

ನಟ ಮುಮುಟ್ಟಿ ಅಭಿನಯದ 'ಬಾಜೂಕಾ' ಫೆಬ್ರವರಿರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದು ಆದರೆ ಇನ್ನೂ ಅಧಿಕೃತ ದಿನಾಂಕ ಚಿತ್ರತಂಡ ತಿಳಿಸಿಲ್ಲ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.