ಕನ್ನಡದ ನಟಿ ಹಾಗೂ ಮಾಡೆಲ್ ದಿಶಾ ಮದನ್ ಅವರು ಪ್ರತಿಷ್ಠಿತ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ.
ಇನ್‌ಸ್ಟಾಗ್ರಾಮ್ ಚಿತ್ರ
ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2025) ದಿಶಾ ಭಾಗವಹಿಸಿದರು.
ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2025) ಭಾಗವಹಿಸಿದ ದಿಶಾ,ವಿಶೇಷ ಉಡುಗೆಯಲ್ಲಿ ಕನ್ನಡದ ಕಂಪನ್ನು, ದಕ್ಷಿಣ ಭಾರತದ ಸಂಸ್ಕೃತಿಯನ್ನು ಪಸರಿಸಿದ್ದಾರೆ.
ದಿಶಾ ಅವರು ಈ ಪ್ರತಿಷ್ಟಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಚೆಟ್ಟಿನಾಡ್ ಬಳಿ ವಿಶೇಷ ಕುಶಲಕರ್ಮಿಗಳು ರೇಷ್ಮೆ ಹಾಗೂ ಚಿನ್ನದ ಎಳೆಗಳಿಂದ ನೇಯ್ದ ವಿಶೇಷ ಕಾಂಚಿವರಂ ಸೀರೆ ಹಾಗೂ ರವಿಕೆಯಲ್ಲಿ ಮಿಂಚಿದ್ದಾರೆ.
ದಿಶಾ ಮದನ್
ಗಜರಾಜ್ ಜ್ಯೂವಲರಿಯ ವಿಶೇಷ ಚಿನ್ನ, ವಜ್ರಾಭರಣಗಳನ್ನು ಧರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.