ADVERTISEMENT

ಡೈಲಾಗ್‌ ಟ್ರೇಲರ್‌ನಲ್ಲಿ ಗರ್ಜಿಸಿದ ಧ್ರುವ ಸರ್ಜಾ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 10:38 IST
Last Updated 24 ಅಕ್ಟೋಬರ್ 2019, 10:38 IST
‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ
‘ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ   

ನಂದ ಕಿಶೋರ್‌ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಪೊಗರು’ ಚಿತ್ರದ ಡೈಲಾಗ್‌ ಟ್ರೇಲರ್ ಬಿಡುಗಡೆಯಾಗಿದೆ. ಧ್ರುವ ಅವರ ಖಡಕ್‌ ಡೈಲಾಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

‘ಅಡ್ರೆಸ್‌ ತಿಳಿದುಕೊಂಡು ಸರ್ವಿಸ್‌ ಮಾಡೊದಕ್ಕೆ ಕೊರಿಯರ್‌ ಹುಡುಗ ಅಂದುಕೊಂಡೆಯಾ... ಪೈಟರ್‌... ಹೊಡೆದ್ರೆ ಯಾವನೂ ಅಡ್ರೆಸ್‌ಗೆ ಇರಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್‌ ಹೇಳು...’ ಎಂದು ಧ್ರುವ ಸರ್ಜಾ ಡೈಲಾಗ್‌ ಹೇಳಿದ್ದಾರೆ.

‘ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೆ ಸೀರಿಯಸ್‌ ಆಗಿದ್ದೀರಾ... ಸಿರಿಯಸ್ಸಾಗಿ ಹೊಡೆದ್ರೆ ಸೀದಾ ಸುಡುಗಾಡೇ’ ಎಂದು ಹೂಂಕರಿಸಿದ್ದಾರೆ.

ADVERTISEMENT

ಈಗಾಗಲೇ, ಈ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್‌ 24ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಒಂದು ವೇಳೆ ಈ ದಿನದಂದು ಬಿಡುಗಡೆ ಸಾಧ್ಯವಾಗದಿದ್ದರೆ ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ಧ್ರುವ ಸರ್ಜಾ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಅವರದು ವಿಲನ್‌ ಪಾತ್ರ. ಅಂತರರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್‌ಗಳ ಜೊತೆಗೆ ಅವರು ಧ್ರುವ ಎದುರು ತೊಡೆತಟ್ಟಿರುವುದು ಈ ಚಿತ್ರದ ವಿಶೇಷ. ಬಿ.ಕೆ. ಗಂಗಾಧರ್ ಆರ್ಥಿಕ ಇಂಧನ ಒದಗಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.