ADVERTISEMENT

ಮಾಲ್ಡೀವ್ಸ್ ಕಡಲ ತೀರದಲ್ಲಿ ಕರಾವಳಿಯ ಬೆಡಗಿ ಪೂಜಾ ಹೆಗ್ಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2021, 6:41 IST
Last Updated 15 ನವೆಂಬರ್ 2021, 6:41 IST
ಪೂಜಾ ಹೆಗ್ಡೆ ಮಾಲ್ಡೀವ್ಸ್ ಪ್ರವಾಸವನ್ನು ಆನಂದಿಸುತ್ತಾ ಕಾಲ ಕಳೆಯುತ್ತಿದ್ದಾರೆ.
ಪೂಜಾ ಹೆಗ್ಡೆ ಮಾಲ್ಡೀವ್ಸ್ ಪ್ರವಾಸವನ್ನು ಆನಂದಿಸುತ್ತಾ ಕಾಲ ಕಳೆಯುತ್ತಿದ್ದಾರೆ.   

ಬೆಂಗಳೂರು: ಬಾಲಿವುಡ್ ಅಂಗಳದಲ್ಲಿ ವಿಶೇಷ ಛಾಪು ಮೂಡಿಸಿರುವ ಉಡುಪಿ ಮೂಲದ ಪೂಜಾ ಹೆಗ್ಡೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.

ಈ ಮೂಲಕ ಅವರು ಲಾಕ್‌ಡೌನ್ ತೆರವಿನ ಬಳಿಕ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ ಸೆಲೆಬ್ರಿಟಿಗಳ ಸಾಲಿಗೆ ಸೇರಿದ್ದಾರೆ.

ಮಾಡೆಲಿಂಗ್‌ನಲ್ಲೂ ಹೆಸರು ಮಾಡಿರುವ ನಟಿ ಪೂಜಾ ಹೆಗ್ಡೆ, 2012ರಲ್ಲಿ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.

ADVERTISEMENT

ಮಾಲ್ಡೀವ್ಸ್ ಕಡಲ ತೀರದಲ್ಲಿ ವಿಹರಿಸುತ್ತಾ, ಒಂದು ಅಸಾಮಾನ್ಯ ಅನುಭವಕ್ಕಾಗಿ ಎದುರು ನೋಡುತ್ತಿರುವ ಸಾಮಾನ್ಯ ಹುಡುಗಿ.. ಎಂಬ ಅಡಿಬರಹದೊಂದಿಗೆ ಪೂಜಾ ಹೆಗ್ಡೆ ಹೊಸ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ಲಾಕ್‌ಡೌನ್ ತೆರವಿನ ಬಳಿಕ ಮಾಲ್ಡೀವ್ಸ್‌ ಪ್ರವಾಸ ಹೋಗಿದ್ದಾರೆ.

ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರಾವಳಿಯ ಪೂಜಾ ಹೆಗ್ಡೆ ಫೋಟೊ ಪೋಸ್ಟ್‌ಗಳಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.