ADVERTISEMENT

ಮೋನಿಕಾ ಹಾಡಿಗೆ ಭರ್ಜರಿ ಡ್ಯಾನ್ಸ್: ಬಾಲಕನ ಸ್ಟೆಪ್ಸ್‌ಗೆ ದಂಗಾದ ಪೂಜಾ ಹೆಗ್ಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 7:01 IST
Last Updated 9 ಫೆಬ್ರುವರಿ 2026, 7:01 IST
<div class="paragraphs"><p>ನಟಿ&nbsp;ಪೂಜಾ ಹೆಗ್ಡೆ</p></div>

ನಟಿ ಪೂಜಾ ಹೆಗ್ಡೆ

   

ಚಿತ್ರ: ಇನ್‌ಸ್ಟಾಗ್ರಾಂ

‘ಕೂಲಿ’ ಸಿನಿಮಾದ ಮೋನಿಕಾ ಹಾಡು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಅನಿರುದ್ಧ್ ರವಿಚಂದರ್ ಅವರ ಸಂಗೀತದಲ್ಲಿ ಮೂಡಿಬಂದಿದ್ದ ಈ ಹಾಡು ಹಲವು ಕಾರ್ಯಕ್ರಮ, ಪಾರ್ಟಿಗಳಲ್ಲಿ ಕೇಳಸಿಗುತ್ತದೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಪೂಜಾ ಹೆಗ್ಡೆ ಅವರ ಡ್ಯಾನ್ಸ್ ಬಗ್ಗೆ ಹೆಚ್ಚೆನೂ ಹೇಳಬೇಕಿಲ್ಲ.

ADVERTISEMENT

ನಟಿ ಪೂಜಾ ಹೆಗ್ಡೆ

ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ ಮೋನಿಕಾ ಹಾಡಿಗೆ ಪುಟ್ಟ ಬಾಲಕನೊಬ್ಬ ಭರ್ಜರಿಯಾಗಿ ಡ್ಯಾನ್ಸ್‌ ಮಾಡಿದ್ದಾನೆ. ಈ ಬಾಲಕನ ನೃತ್ಯ ನೋಡಿದ ಪೂಜಾ ಹೆಗ್ಡೆ ಅಚ್ಚರಿಗೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಯನತಾರಾ, ಕೃತಿ ಶೆಟ್ಟಿ, ಶ್ರೀಲೀಲಾ ಸಾಕಷ್ಟು ನಟಿಯರು ಭಾಗಿಯಾಗಿದ್ದರು. ಅದರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು.

ನಟಿ ವೇದಿಕೆ ಮೇಲೆ ಬರುತ್ತಿದ್ದಂತೆ ಮೋನಿಕಾ ಹಾಡಿಗೆ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದಾರೆ. ಇದೇ ವೇಳೆ 5 ವರ್ಷದ ‍ಪುಟ್ಟ ಬಾಲಕನೊಬ್ಬ ಯಾವುದೇ ಭಯವಿಲ್ಲದೆ ಮೋನಿಕಾ ಹಾಡಿಗೆ ಪೂಜಾ ಹೆಗ್ಡೆ ಮುಂದೆ ಡ್ಯಾನ್ಸ್ ಮಾಡಿದ್ದಾನೆ. ಬಾಲಕನ ವೇಗದ ಡ್ಯಾನ್ಸ್ ನೋಡಿ ನಟಿ ದಂಗಾಗಿದ್ದಾರೆ. ಅಲ್ಲದೇ ಬಾಲಕನ ಸರಿಸಮಕ್ಕೆ ಡ್ಯಾನ್ಸ್ ಮಾಡಲು ಸಾಧ್ಯವಾಗದೇ ಪೂಜಾ ಹೆಗ್ಡೆ ಕೂಡ ಸುಸ್ತಾಗಿದ್ದಾರೆ. ಇದೇ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಾಲಕನ ಡ್ಯಾನ್ಸ್‌ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.