ADVERTISEMENT

ಪ್ರಭಾಸ್ ನಟನೆಯ ದಿ ರಾಜಾ ಸಾಬ್‌ ಚಿತ್ರದ ‘ಸಹನಾ ಸಹನಾ...’ ಹಾಡು ಬಿಡುಗಡೆ

ಪ್ರಜಾವಾಣಿ ವಿಶೇಷ
Published 20 ಡಿಸೆಂಬರ್ 2025, 1:00 IST
Last Updated 20 ಡಿಸೆಂಬರ್ 2025, 1:00 IST
ನಿಧಿ, ಪ್ರಭಾಸ್‌ 
ನಿಧಿ, ಪ್ರಭಾಸ್‌    

ನಟ ಪ್ರಭಾಸ್‌ ನಟನೆಯ ಹೊಸ ಸಿನಿಮಾ ‘ದಿ ರಾಜಾ ಸಾಬ್‌’ ಜ.9ರಂದು ತೆರೆಕಾಣುತ್ತಿದ್ದು, ಸಿನಿಮಾದ ‘ಸಹನಾ ಸಹನಾ..’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. 

ಹಾಡಿನ ಕುರಿತು ಮಾತನಾಡಿರುವ ಚಿತ್ರದ ಸಂಗೀತ ನಿರ್ದೇಶಕ ಥಮನ್ ಎಸ್., ‘ಚಿತ್ರದ ಹಾಡುಗಳು ಅದ್ಭುತವಾಗಿ ಬಂದಿವೆ. ಚಿತ್ರದಲ್ಲಿ ಪ್ರಭಾಸ್ ಅವರ ಡಾನ್ಸ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ಹಬ್ಬವಾಗಲಿದೆ’ ಎಂದಿದ್ದಾರೆ. 

ಆ್ಯಕ್ಷನ್‌ ಅವತಾರದಲ್ಲಿಯೇ ತೆರೆಗಳಲ್ಲಿ ಮಿಂಚಿರುವ ಪ್ರಭಾಸ್‌, ಇದೇ ಮೊದಲ ಬಾರಿಗೆ ಹಾರರ್ ಜಾನರ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಮಾರುತಿ ನಿರ್ದೇಶನದ ಈ ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಜನವರಿ 8 ರಂದು ಚಿತ್ರದ ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ.

ADVERTISEMENT

ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯರಾಗಿ ಮಾಳವಿಕಾ ಮೋಹನನ್‌, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಟಿಸಿದ್ದಾರೆ. ಬಿಗ್‌ ಬಜೆಟ್‌ನ ಈ ಚಿತ್ರಕ್ಕೆ ಕಾರ್ತಿಕ್ ಪಲನಿ ಛಾಯಾಚಿತ್ರಗ್ರಹಣವಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳ ಭಾಷೆಗಳಲ್ಲಿ ಈ ಚಿತ್ರ ರಿಲೀಸ್‌ ಆಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.