ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ನಟ ಪ್ರಕಾಶ್ ರಾಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಅಕ್ಟೋಬರ್ 2025, 10:57 IST
Last Updated 31 ಅಕ್ಟೋಬರ್ 2025, 10:57 IST
<div class="paragraphs"><p>ಚಿತ್ರ ಕೃಪೆ:&nbsp;Prakash Raj</p></div>

ಚಿತ್ರ ಕೃಪೆ: Prakash Raj

   

2025–26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 70 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಚಲನಚಿತ್ರ / ಕಿರುತೆರೆ ವಿಭಾಗದಲ್ಲಿ ನಟ ಪ್ರಕಾಶ್ ರಾಜ್ ಹಾಗೂ ನಟಿ ವಿಜಯಲಕ್ಷ್ಮಿಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ನಟ ಪ್ರಕಾಶ್ ರಾಜ್, ‘ನಮ್ಮ ಹೆಮ್ಮೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ ಸಮಿತಿಗೆ, ಕರ್ನಾಟಕ ಸರ್ಕಾರಕ್ಕೆ, ನನ್ನನ್ನು ಪ್ರೀತಿಸಿ ಬೆಳೆಸಿದ ನಿಮಗೆಲ್ಲರಿಗೂ ಧನ್ಯವಾದಗಳು‘ ಎಂದು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಸಿನಿಮಾಗಳಲ್ಲಿ ನಟನೆ, ಧ್ವನಿಯ ಮೂಲಕ ಸ್ಯಾಂಡಲ್‌ವುಡ್‌ ಮಾತ್ರವಲ್ಲ ತೆಲುಗು, ತಮಿಳಿನಲ್ಲಿ ಕೂಡ ಖ್ಯಾತಿಗಳಿಸಿದ್ದಾರೆ. ‘ನಾಗಮಂಡಲ’ ‘ಅಜಯ್’ ‘ರಾಜಕುಮಾರ', 'ಯುವರತ್ನ', ‘ಬಘೀರ‘ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಇವರ ಖಳನಾಯಕ ಪಾತ್ರಕ್ಕೆ ಈಗಲೂ ಮೆಚ್ಚುಗೆ ಸೂಚಿಸುವ ಪ್ರೇಕ್ಷಕ ವರ್ಗವೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.