ADVERTISEMENT

ಸ್ಪಿರಿಟ್‌ನಿಂದ ಪ್ರಕಾಶ್ ರಾಜ್ ಹೊರಕ್ಕೆ; ಹರಿದಾಡಿದ ಸುದ್ದಿಗೆ ನಟನ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 10:38 IST
Last Updated 9 ಫೆಬ್ರುವರಿ 2026, 10:38 IST
<div class="paragraphs"><p>ಪ್ರಕಾಶ್ ರಾಜ್ </p></div>

ಪ್ರಕಾಶ್ ರಾಜ್

   

ಪ್ರಭಾಸ್‌ ಮತ್ತು ತೃಪ್ತಿ ದಿಮ್ರಿ ನಟನೆಯ ಸ್ಪಿರಿಟ್‌ ಚಿತ್ರದಲ್ಲಿ ನಟಿಸಬೇಕಿದ್ದ ನಟ ಪ್ರಕಾಶ್‌ ರಾಜ್‌ ಅವರಿಗೂ ನಿರ್ದೇಶಕ ಸಂದೀಪ್‌ ರೆಡ್ಡಿ ವಾಂಗಾ ಅವರಿಗೂ ಭಿನ್ನಾಭಿಪ್ರಾಯ ಉಂಟಾಗಿದ್ದು, ಚಿತ್ರದಿಂದ ಪ್ರಕಾಶ್ ರಾಜ್‌ ಅವರನ್ನು ಕೈಬಿಡಲಾಗಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. 

ಆದರೆ ಇದು ಸುಳ್ಳು ಎಂದಿರುವ ಪ್ರಕಾಶ್‌ ರಾಜ್‌, ಸುಳ್ಳು ಸುದ್ದಿ ಹಬ್ಬಿಸಿದವರನ್ನೇ ಟೀಕಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಎಲ್ಲಾ ವಿಷಕಾರಿ ನಕಲಿ ಸುದ್ದಿ ವ್ಯಾಪಾರಿಗಳಿಗೆ... ಸ್ಪಿರಿಟ್ ಚಿತ್ರದಲ್ಲಿ ನನ್ನ ಪಾತ್ರದ ದೃಶ್ಯಗಳ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಆದರೆ ನೀವುಗಳು ವಾಟ್ಸಪ್ ಫ್ಯಾಕ್ಟರಿಗಳಲ್ಲಿ ಕಥೆಗಳನ್ನು ಊಹಿಸುತ್ತಿದ್ದೀರಿ. ಜೀವನದಲ್ಲಿ ಬೆಳೆಯಿರಿ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸ್ಪಿರಿಟ್‌ ಸಿನಿಮಾ 2027ರ ಮಾರ್ಚ್‌ 5ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಸಿನಿಮಾದಿಂದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹೊರಬಂದಿದ್ದರು. 

ಟಿ–ಸೀರಿಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟ ಪ್ರಕಾಶ್ ರಾಜ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ, ಹಿಂದಿ, ಮಲಯಾಳ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ‘ಸ್ಪಿರಿಟ್’ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.