ADVERTISEMENT

ಡೆವಿಲ್‌ ಈಸ್‌ ಬ್ಯಾಕ್‌: ಶಸ್ತ್ರಚಿಕಿತ್ಸೆ ಬಳಿಕ ನಟ ಪ್ರಕಾಶ್‌ ರಾಜ್‌ ಟ್ವೀಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2021, 14:01 IST
Last Updated 11 ಆಗಸ್ಟ್ 2021, 14:01 IST
ಟ್ವಿಟರ್‌ನಲ್ಲಿ ಪ್ರಕಾಶ್‌ ರಾಜ್‌ ಹಂಚಿಕೊಂಡಿರುವ ಚಿತ್ರ
ಟ್ವಿಟರ್‌ನಲ್ಲಿ ಪ್ರಕಾಶ್‌ ರಾಜ್‌ ಹಂಚಿಕೊಂಡಿರುವ ಚಿತ್ರ   

ಬೆಂಗಳೂರು: ಚಿತ್ರೀಕರಣದ ವೇಳೆ ಕುಸಿದು ಬಿದ್ದು ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.

ಈ ಬಗ್ಗೆ ಬುಧವಾರ ಟ್ವೀಟ್‌ ಮೂಲಕ ಚಿತ್ರವೊಂದನ್ನು ಹಂಚಿಕೊಂಡಿರುವ ಅವರು, 'ಮತ್ತೆ ಮರಳಿದ ದೈತ್ಯ... ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಆತ್ಮೀಯ ಸ್ನೇಹಿತರಾದ ಡಾ.ಗುರುವಾ ರೆಡ್ಡಿ ಅವರಿಗೆ ಧನ್ಯವಾದಗಳು. ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗನೇ ಕೆಲಸಕ್ಕೆ ಮರಳುವೆ' ಎಂದು ತಿಳಿಸಿದ್ದಾರೆ.

ಚೆನ್ನೈನಲ್ಲಿ ನಟ ಧನುಷ್ ಅಭಿನಯದ #D44 ಚಿತ್ರೀಕರಣದ ವೇಳೆ ಪ್ರಕಾಶ್ ರಾಜ್‌ ಅವರು ಕುಸಿದು ಬಿದ್ದು ಗಾಯಗೊಂಡಿದ್ದರು. ಭುಜಕ್ಕೆ ಏಟಾಗಿದ್ದರಿಂದ ಹೈದರಾಬಾದ್‌ನಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.