ADVERTISEMENT

ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳನ್ನು ಪಡೆದ ಪ್ರೀತಿ ಜಿಂಟಾ ದಂಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2021, 6:40 IST
Last Updated 18 ನವೆಂಬರ್ 2021, 6:40 IST
ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ಇನಫ್
ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ಇನಫ್    

ಬೆಂಗಳೂರು: ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಸಹ ಮಾಲಿಕತ್ವ ಹೊಂದಿರುವ ಪ್ರೀತಿ ಜಿಂಟಾ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ.

ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ಇನಫ್ ದಂಪತಿ ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

ಅವಳಿ ಮಕ್ಕಳಿಗೆ ಜೈ ಜಿಂಟಾ ಗುಡ್‌ಇನಫ್ ಮತ್ತು ಜಿಯಾ ಜಿಂಟಾ ಗುಡ್‌ಇನಫ್ ಎಂಬ ಹೆಸರು ಇರಿಸಲಾಗಿದೆ. ಅವರನ್ನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ. ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಜಿಂಟಾ ಪೋಸ್ಟ್ ಮಾಡಿದ್ದಾರೆ.

ADVERTISEMENT

ಪತಿ ಜೀನ್ ಜತೆಗಿನ ಸೆಲ್ಫಿ ಒಂದನ್ನು ಪ್ರೀತಿ ಜಿಂಟಾ ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಂದ ಶುಭಾಶಯ ಹರಿದುಬಂದಿದೆ.

ಪ್ರೀತಿ ಜಿಂಟಾ ಅವರು ಜೀನ್ ಗುಡ್‌ಇನಫ್ ಅವರನ್ನು 2016ರ ಫೆಬ್ರುವರಿ 29ರಂದು ಮದುವೆಯಾಗಿದ್ದು, ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.