ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಮಿಸ್ ನಂದಿನಿ’ ಚಿತ್ರೀಕರಣ ಮುಗಿಯುತ್ತಾ ಬಂದಿದೆ. ಸರ್ಕಾರಿ ಶಾಲೆ ಉಳಿಯಬೇಕು ಎನ್ನುವ ಸಂದೇಶ ಈ ಚಿತ್ರದಲ್ಲಿದೆಯಂತೆ.
ಶ್ರೀ ವಿಜಯ್ ಫಿಲಂಸ್ ಲಾಂಛನದ ಅಡಿ ನೀಲಕಂಠಸ್ವಾಮಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಆಶಾ ಅವರು ಸಹ ನಿರ್ಮಾಪಕರು. ಸಾರ್ವತ್ರಿಕ ವಿಷಯವಾಗಿರುವುದರಿಂದ ಕನ್ನಡ , ತೆಲುಗು, ಹಿಂದಿ, ತಮಿಳು, ಮಲೆಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಒಟಿಟಿದಿಂದ ಬೇಡಿಕೆ ಬಂದಿದೆ. ಇನ್ನೂ ನಿರ್ಣಯಿಸಿಲ್ಲ ಎಂದರು ನಿರ್ದೇಶಕಗುರುದತ್ತಎಸ್.ಆರ್.
ಬೆಂಗಳೂರಿನಿಂದ ಆಧುಕಿನ ಶಿಕ್ಷಕಿಯಾಗಿ ಇಲ್ಲಿಗೆ ಬಂದು ಪರಿವರ್ತನೆ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಸಹ ಅಮೆರಿಕದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದವಳು. ಅರ್ಥಪೂರ್ಣ ಸಂದೇಶವನ್ನು ಹಾಸ್ಯದ ಅಂಶಗಳೊಂದಿಗೆ ಹೇಳಿದ್ದೇವೆ. ಪಾತ್ರದಲ್ಲಿ ಮೃದು ಆಗಿ ಕಂಡರೂ ಕೆಲವು ಕಡೆ ಶಕ್ತಿಶಾಲಿಯಾಗಿ ಕಾಣಿಸಿ ಕೊಂಡಿದ್ದೇನೆ ಎಂದರು ಮಿಸ್ ನಂದಿನಿ ಪಾತ್ರದಲ್ಲಿರುವ ಪ್ರಿಯಾಂಕಾ ಉಪೇಂದ್ರ.
ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ 35 ದಿನಗಳ ಕಾಲ ಶೂಟಿಂಗ್ ನಡೆದಿದೆ. ಶಾರದೆ, ನಾಡು ನುಡಿ, ತಾಯಿ ಹಾಗೂ ರಾಜ್ಯೋತ್ಸವ ಕುರಿತ ನಾಲ್ಕು ಹಾಡುಗಳು ಇವೆ. ವಿಜಯಪ್ರಕಾಶ್, ವಾಸುಕಿವೈಭವ್, ಅನುರಾಧಾಭಟ್ ಗೀತೆಗಳಿಗೆ ಧ್ವನಿಯಾಗಿದ್ದಾರೆಂದು ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಸಾಯಿಸರ್ವೇಶ್ ಹೇಳಿದರು.
ಭವ್ಯಾ, ಡ್ಯಾನಿಕುಟ್ಟಪ್ಪ, ಖಳ ನಟ ರತನ್,’ ಅನ್‌ಮೋಲ್, ಚಿಣ್ಣರಾದ ಸೃಷ್ಟಿ, ಶ್ರುತಿ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.