
ಚಿತ್ರ ಕೃಪೆ: PRK Productions
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಅಡಿಯಲ್ಲಿ ನಿರ್ಮಾಣವಾಗಿರುವ, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶಿಸಿರುವ‘ಮಾರಿಗಲ್ಲು’ ವೆಬ್ ಸರಣಿಯ ಜಿ5 ನಲ್ಲಿ ಬಿಡುಗಡೆಯಾಗಿದೆ.
ಈ ಸರಣಿಯಲ್ಲಿ 7 ಸಂಚಿಕೆಗಳಿವೆ. ಮೊದಲ ಸಂಚಿಕೆಯನ್ನು ಉಚಿತವಾಗಿ ನೋಡಬಹುದಾಗಿದ್ದು ಉಳಿದ ಸಂಚಿಕೆ ನೊಡಬೇಕೆಂದರೆ ಜಿ5 ಚಂದಾದಾರಿಕೆ ಪಡೆಯಬೇಕಿದೆ.
‘ಮಾರಿಗಲ್ಲು’ ಮೊದಲ ಸಂಚಿಕೆಗೆ ಪ್ರೇಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಮಾರಿಗಲ್ಲು ಮೂಲಕ ನಟ ರಂಗಾಯಣ ರಘು ಅವರು ವೆಬ್‌ಸರಣಿ ಲೋಕಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿರುವ ರಘು ಮೊದಲ ಬಾರಿ ವೆಬ್‌ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮಾರಿಗಲ್ಲು' ಕಥೆಯೇನು? ಕಾದಂಬರಿ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿ ಆರಂಭವಾಗುತ್ತದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಹಿನ್ನೆಲೆಯಲ್ಲಿ ಕಥೆ ಇದರಲ್ಲಿ ಇದೆ. 1990ರ ಕಾಲಘಟ್ಟದಲ್ಲಿ ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಸುತ್ತ ಕಥೆ ಸಾಗುತ್ತದೆ. ಶಿರಸಿಯ ಪ್ರಖ್ಯಾತ ಬೇಡರ ವೇಷವನ್ನೂ ಈ ಸರಣಿಯಲ್ಲಿ ಕಾಣಬಹುದು. ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ.
ಗೋಪಾಲ್ ಕೃಷ್ಣ ದೇಶಪಾಂಡೆ,ರಂಗಾಯಣ ರಘು, ಪ್ರಶಾಂತ್ ಸಿದ್ದಿ, ಪ್ರವೀಣ್ ತೇಜ್, ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟಿಸಿದ್ದಾರೆ. ಈ ವೆಬ್ ಸರಣಿಯ ಟ್ರೇಲರ್ ಮೆಚ್ಚಿಕೊಂಡ ಪ್ರೇಕ್ಷಕರು ಸಂಚಿಕೆ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.