ಮಾರ್ಚ್ 17ರಂದು ಸ್ಯಾಂಡಲ್‌ವುಡ್‌ನ 'ಪವರ್ ಸ್ಟಾರ್', ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಅಪ್ಪು ಅವರ ಹುಟ್ಟು ಹಬ್ಬದ ಪ್ರಯುಕ್ತ 'ಆಕಾಶ್’ ಚಿತ್ರ ಮರು ಬಿಡುಗಡೆಯಾಗುತ್ತಿದೆ.
ಈ ಕುರಿತು ಪುನೀತ್ ಪತ್ನಿ ಅಶ್ವಿನಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ’ ಎಂದು ಅಡಿಬರಹ ಬರೆದು ‘ಆಕಾಶ್’ ಚಿತ್ರದ ಪೋಸ್ಟರ್ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿ ರಮ್ಯಾ ಅವರು ನಟಿಸಿರುವ ‘ಆಕಾಶ್’ ಚಿತ್ರವು ಮಾರ್ಚ್ 13ರಂದು ಮರುಬಿಡುಗಡೆಯಾಗುತ್ತಿದೆ.
ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ ‘ಆಕಾಶ್' ಚಿತ್ರವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ 2005ರಲ್ಲಿ ಮೊದಲ ಬಾರಿ ಪ್ರದರ್ಶನ ಕಂಡಿತ್ತು.
ಈ ಚಿತ್ರದ ‘ನೀನೆ ನೀನೆ ನನಗೆಲ್ಲಾ ನೀನೆ‘, 'ಹಬ್ಬ ಹಬ್ಬ ಮದುವೆ ಹಬ್ಬ', 'ಏನಿದು ಈ ದಿನ' ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.