ADVERTISEMENT

ಫಿಟ್ನೆಸ್ ಮತ್ತು ಜಿಮ್ ವರ್ಕೌಟ್ ವಿಡಿಯೊ ಪೋಸ್ಟ್ ಮಾಡಿದ ಪುನೀತ್ ರಾಜ್‌ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಆಗಸ್ಟ್ 2021, 8:21 IST
Last Updated 20 ಆಗಸ್ಟ್ 2021, 8:21 IST
ನಟ ಪುನೀತ್ ರಾಜ್‌ಕುಮಾರ್ ಫಿಟ್ನೆಸ್ ವಿಡಿಯೊ- ಇನ್‌ಸ್ಟಾಗ್ರಾಂ ಪೋಸ್ಟ್
ನಟ ಪುನೀತ್ ರಾಜ್‌ಕುಮಾರ್ ಫಿಟ್ನೆಸ್ ವಿಡಿಯೊ- ಇನ್‌ಸ್ಟಾಗ್ರಾಂ ಪೋಸ್ಟ್   

ಬೆಂಗಳೂರು: ಚಂದನವನದ ಪ್ರಸಿದ್ಧ ನಟ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾ ರಂಗದಲ್ಲಿ ಎಲ್ಲ ವರ್ಗದ ಪ್ರೇಕ್ಷಕರ ಮನಗೆಲ್ಲುವ ಪಾತ್ರ ಮಾಡುವಲ್ಲಿ ನಿಸ್ಸೀಮರು..

ಹೀಗಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಅಧಿಕವಾಗಿದೆ.

ಸಿನಿಮಾ ಕ್ಷೇತ್ರದಲ್ಲಿ ಸದಾ ಬ್ಯುಸಿಯಾಗಿರುವ ಪುನೀತ್, ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾ ಬ್ಯುಸಿಯಾಗಿರುವ ವಿಡಿಯೊ ಒಂದನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಆರೋಗ್ಯವೇ ನಿಜವಾದ ಸಂಪತ್ತು ಎಂಬ ಅಡಿಬರಹದೊಂದಿಗೆ ಪುನೀತ್ ಜಿಮ್‌ ವಿಡಿಯೊ ಪೋಸ್ಟ್ ಮಾಡಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭಕೋರಿದ್ದಾರೆ.

ಪುನೀತ್ ವರ್ಕೌಟ್ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.