ಎಕ್ಸ್ ಖಾತೆ: @alluarjun
ಹೈದರಾಬಾದ್: ಪುಷ್ಪ–2 ಅಭಿನಯಕ್ಕಾಗಿ ಅಲ್ಲು ಅರ್ಜುನ್‌ಗೆ 'ಗದ್ದರ್ ತೆಲಂಗಾಣ ಚಲನಚಿತ್ರ ಪ್ರಶಸ್ತಿ 2024'ರ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶನಿವಾರ ನಡೆದ 'ಗದ್ದರ್ ತೆಲಂಗಾಣ ಚಲನಚಿತ್ರ ಪ್ರಶಸ್ತಿ ' ಪ್ರದಾನ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇದೇ ವೇಳೆ ನಿರ್ದೇಶಕ ಮಣಿರತ್ನಂ ಅವರಿಗೆ ಪೈಡಿ ಜೈರಾಜ್ ಚಲನಚಿತ್ರ ಪ್ರಶಸ್ತಿ, ನಟ ವಿಜಯ್ ದೇವರಕೊಂಡಗೆ ಕಾಂತ ರಾವ್ ಪ್ರಶಸ್ತಿ ಮತ್ತು ನಟ ಎನ್. ಬಾಲಕೃಷ್ಣ ಅವರಿಗೆ ಎನ್.ಟಿ.ಆರ್ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ.
ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್, ಸಿಎಂ ರೆಡ್ಡಿ ಸೇರಿದಂತೆ ಅನೇಕರಿಗೆ ಧನ್ಯವಾದ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮಾತನಾಡಿ, 2047ರ ವೇಳೆಗೆ ತೆಲಂಗಾಣವನ್ನು 3ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸರ್ಕಾರದ ದೃಷ್ಟಿಕೋನವನ್ನು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಚಲನಚಿತ್ರೋದ್ಯಮದ ಕೊಡುಗೆಯೂ ಮುಖ್ಯವಾದದ್ದು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಬಾಲಕೃಷ್ಣ, ದಿವಂಗತ ಜಾನಪದ ಗಾಯಕ ಗದ್ದರ್ ಅವರ ಹೆಸರಿನಲ್ಲಿ ಪ್ರಶಸ್ತಿ ಸಮಾರಂಭ ಆಯೋಜಿಸಿದಕ್ಕಾಗಿ ತೆಲಂಗಾಣ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಜತೆಗೆ ಹತ್ತು ವರ್ಷಗಳ ಬಳಿಕ ಕಾರ್ಯಕ್ರಮವನ್ನು ಪುನಾರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.