Pushpa-2 The Rule
ಬೆಂಗಳೂರು: ಬಹುನಿರೀಕ್ಷಿತ ಪುಷ್ಪ–2 ಸಿನಿಮಾ ನಾಳೆ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಕೆಲವೆಡೆ ಇಂದು ರಾತ್ರಿಯಿಂದಲೇ ಪ್ರದರ್ಶನಗಳು ನಡೆಯಲಿವೆ ಎನ್ನಲಾಗಿದೆ.
ಏತನ್ಮಧ್ಯೆ ಸ್ಟಾರ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪುಷ್ಪ-2 ಟಿಕೆಟ್ ಮುಂಗಡ ಬುಕ್ಕಿಂಗ್ ನಿನ್ನೆಗೆ ಕೊನೆಗೊಂಡಂತೆ (ಡಿ.3) ಗಳಿಕೆ ₹80 ಕೋಟಿಗೂ ಅಧಿಕ ಎನ್ನಲಾಗಿದೆ.
ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿರುವ ಈ ಚಿತ್ರದ ಟಿಕೆಟ್ ಮುಂಗಡ ಬುಕ್ಕಿಂಗ್ ₹100 ಕೋಟಿ ಮೀರಬಹುದು ಎಂದು ಹಲವು ಸಿನಿ ವಿಮರ್ಶಕರು ಭರವಸೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ಕೊನೆಗೊಂಡಂತೆ ಮುಂಗಡ ಬುಕ್ಕಿಂಗ್ ₹80 ಕೋಟಿಗೂ ಅಧಿಕ. ಒಟ್ಟಾರೆ ನಾಳೆ ಸಿನಿಮಾ ಪ್ರದರ್ಶನಕ್ಕೂ ಮುನ್ನ ₹100 ಕೋಟಿ ಕೇವಲ ಮುಂಗಡ ಬುಕ್ಕಿಂಗ್‌ನಿಂದ ಬರುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಒಂದು ಹೊಸ ಐತಿಹಾಸಿಕ ದಾಖಲೆ ಎಂದು ಹಲವರು ಬಣ್ಣಿಸಿದ್ದಾರೆ.
ತೆಲುಗು ಹಾಗೂ ಹಿಂದಿ ವರ್ಷನ್‌ಗಳಿಂದ ಅತಿ ಹೆಚ್ಚು ಗಳಿಕೆ ಇದೆ.
ಪುಷ್ಪ–1 ದಿ ರೈಸ್ ಸಿನಿಮಾ ಅಂತೂ ಭಾರಿ ಯಶಸ್ಸು ಕಂಡು ಸಾವಿರ ಕೋಟಿ ಕ್ಲಬ್ ಸೇರಿತ್ತು. ಮೈತ್ರಿ ಮೂವೀಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.
ಟ್ರೇಲರ್‌ನಲ್ಲಿ ಪುಷ್ಪ–2 ಅದ್ಧೂರಿಯಾಗಿ ಮೂಡಿಬಂದಿದ್ದು ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡುವಂತೆ ಮಾಡಿದೆ.
ಚಿತ್ರದಲ್ಲಿ ಎಎ ಜೊತೆ ಕನ್ನಡದ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಪ-1 ಚಿತ್ರವು 2021ರ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.